ಶನಿವಾರ, ಏಪ್ರಿಲ್ 17, 2021
30 °C

ಕ್ರಿಕೆಟ್: ಇಂಗ್ಲೆಂಡ್‌ಗೆ ಬೆಸ್ಟೋವ್ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಇಂಗ್ಲೆಂಡ್‌ಗೆ ಬೆಸ್ಟೋವ್ ಆಸರೆ

ಲಂಡನ್: ಇಯಾನ್ ಬೆಲ್ ಹಾಗೂ ಜಾನಿ ಬೆಸ್ಟೋವ್ ಅವರ ಅರ್ಧ ಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡದವರು ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ.ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆತಿಥೇಯ ಇಂಗ್ಲೆಂಡ್ 59 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 101.2 ಓವರ್‌ಗಳಲ್ಲಿ 309 ರನ್ ಕಲೆಹಾಕಿತ್ತು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಬಳಿಕ ಜೀನ್ ಪಾಲ್ ಡುಮಿನಿ ಹಾಗೂ ವೆರ್ನಾನ್ ಫಿಲ್ಯಾಂಡರ್ ತಂಡಕ್ಕೆ ಆಸರೆಯಾದರು. ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 101.2 ಓವರ್‌ಗಳಲ್ಲಿ 309 (ಎಬಿ ಡಿವಿಲಿಯರ್ಸ್ 27, ಜಾಕ್ ರುಡಾಲ್ಫ್ 42, ಜೀನ್ ಪಾಲ್ ಡುಮಿನಿ 61, ವೆರ್ನಾನ್ ಫಿಲ್ಯಾಂಡರ್ 61; ಜೇಮ್ಸ ಆ್ಯಂಡರ್ಸನ್ 76ಕ್ಕೆ3, ಸ್ಟೀವನ್ ಫಿನ್ 75ಕ್ಕೆ4, ಗ್ರೇಮ್ ಸ್ವಾನ್ 63ಕ್ಕೆ2); ಇಂಗ್ಲೆಂಡ್: 59 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 168 (ಇಯಾನ್ ಬೆಲ್ ಬ್ಯಾಟಿಂಗ್ 52, ಜೇಮ್ಸ ಬೆಸ್ಟೋವ್ ಬ್ಯಾಟಿಂಗ್ 60; ಮಾರ್ನ್ ಮಾರ್ಕೆಲ್ 43ಕ್ಕೆ2, ಡೇಲ್ ಸ್ಟೇಯ್ನ 36ಕ್ಕೆ2).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.