ಕ್ರಿಕೆಟ್ ಇತಿಹಾಸದ ದೂಸ್ರಾ

7

ಕ್ರಿಕೆಟ್ ಇತಿಹಾಸದ ದೂಸ್ರಾ

Published:
Updated:
ಕ್ರಿಕೆಟ್ ಇತಿಹಾಸದ ದೂಸ್ರಾ

ಪ್ಯಾರಾಡೈಮ್ ಮತ್ತು ಪ್ರಕಾಸಂ ಶನಿವಾರ ಸಂಜೆ 7 ಮತ್ತು ಭಾನುವಾರ ಮಧ್ಯಾಹ್ನ 3, ಸಂಜೆ 7ಕ್ಕೆ ಕ್ರಿಕೆಟ್ ಕಥೆ ಆಧರಿಸಿದ ಇಂಗ್ಲಿಷ್ ನಾಟಕ  ‘ದೂಸಾ’್ರ (ನಿರ್ದೇಶನ ಮತ್ತು ರಚನೆ: ಆನಂದ್ ರಾಘವ್) ಪ್ರದರ್ಶಿಸುತ್ತಿವೆ.ಈ ನಾಟಕದಲ್ಲಿ ಕ್ರಿಕೆಟ್ ಆಟದ ಇತಿಹಾಸವೇ ಕಥಾವಸ್ತು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ 20 ವರ್ಷದ ಯುವ ಕ್ರಿಕೆಟಿಗನೊಬ್ಬ ಜೀವನದ ಮೂಲಕ ಕ್ರಿಕೆಟ್ ಕಥೆಯನ್ನು ಬಿಚ್ಚಿಡುತ್ತದೆ ಈ ನಾಟಕ. ಕ್ರಿಕೆಟ್‌ನಲ್ಲಿ ಇಣುಕಿರುವ ರಾಜಕೀಯ, ಆಟದ ಹೆಸರಿನಲ್ಲಿ ಹರಿಯುವ ಹಣದ ಹೊಳೆ, ಆಟಗಾರರ ಮೇಲಿನ ಒತ್ತಡ ಎಲ್ಲವನ್ನೂ 100 ನಿಮಿಷಗಳ ಈ ನಾಟಕದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.ಕ್ರೀಡೆಯೊಂದು ಹೂಡಿಕೆ ಮಾಡುವ ಮಾರುಕಟ್ಟೆ ಉತ್ಪನ್ನವಾಗಿರುವುದನ್ನು ಇದು ಸೂಚಿಸುತ್ತದೆ. ಚುರುಕಾದ ಸಂಭಾಷಣೆ, ತಿಳಿ ಹಾಸ್ಯ, ತಂತ್ರಜ್ಞಾನದ ಅಳವಡಿಕೆಯಿಂದ ಪ್ರೇಕ್ಷಕರನ್ನು ಹಿಡಿದಿಡುತ್ತದೆ.ಇದರ ಚೊಚ್ಚಲ ಪ್ರದರ್ಶನ ಚೆನ್ನೈನಲ್ಲಿ ನಡೆದಿತ್ತು. ಆಗ ಭಾರಿ ಮೆಚ್ಚುಗೆಗೆ ಪಾತ್ರವಾದ ನಾಟಕ ಇದು. ಹವ್ಯಾಸಿ ರಂಗಭೂಮಿಯ ಹಿನ್ನೆಲೆಯಲ್ಲಿ ಬೀದಿ ನಾಟಕದ ತಂತ್ರಜ್ಞಾನ ಅಳವಡಿಸಿಕೊಂಡ ನಾಟಕ ದೂಸ್ರಾ.  ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಪ್ರದರ್ಶನ ನಡೆಯುತ್ತಿದೆ.ಸ್ಥಳ: ಕೆ.ಎಚ್. ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ. ಟಿಕೆಟ್‌ಗಾಗಿ  97412 66001, www.indiastage.in                                

                                       

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry