ಕ್ರಿಕೆಟ್: ಎಂಎಸ್‌ಆರ್‌ಐಟಿಗೆ ಪ್ರಶಸ್ತಿ

7

ಕ್ರಿಕೆಟ್: ಎಂಎಸ್‌ಆರ್‌ಐಟಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಎಂಎಸ್‌ಆರ್‌ಐಟಿ ತಂಡ ಇಲ್ಲಿ ನಡೆದ 16ನೇ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜುಗಳ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಆರ್‌ವಿಇಸಿ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು.ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಂಎಸ್‌ಆರ್‌ಐಟಿ 44.1 ಓವರ್‌ಗಳಲ್ಲಿ 228 ರನ್ ಕಲೆ ಹಾಕಿ ಆಲ್‌ಔಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ವಿಇಸಿ 29 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತ್ತು. ಈ ವೇಳೆ ಮಳೆ ಸುರಿಯಿತು. ಉತ್ತಮ ರನ್ ರೇಟ್ ಆಧಾರದ ಮೇಲೆ ಎಂಎಸ್‌ಆರ್‌ಐಟಿ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.ವೈಯಕ್ತಿಕ ಪ್ರಶಸ್ತಿಗಳು: ಅತ್ಯುತ್ತಮ ಬ್ಯಾಟ್ಸ್‌ಮನ್: ಆರ್. ಪ್ರತೀಕ್ಷ್ (ಎಂಎಸ್‌ಆರ್‌ಐಟಿ, ಒಟ್ಟು 348 ರನ್). ಅತ್ಯುತ್ತಮ ಬೌಲರ್: ಪ್ರತೀಕ್ ಸಿಂಗ್ (ಆರ್‌ವಿಇಸಿ, ಒಟ್ಟು 13 ವಿಕೆಟ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry