ಕ್ರಿಕೆಟ್: ಎಬಿ ಡಿವಿಲಿಯರ್ಸ್ ಅಜೇಯ ಶತಕ

7

ಕ್ರಿಕೆಟ್: ಎಬಿ ಡಿವಿಲಿಯರ್ಸ್ ಅಜೇಯ ಶತಕ

Published:
Updated:
ಕ್ರಿಕೆಟ್: ಎಬಿ ಡಿವಿಲಿಯರ್ಸ್ ಅಜೇಯ ಶತಕ

ವೆಲಿಂಗ್ಟನ್ (ಎಎಫ್‌ಪಿ): ಎಬಿ ಡಿವಿಲಿಯರ್ಸ್ (106) ಗಳಿಸಿದ ಅಜೇಯ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಪಡೆಯಿತು.ವೆಸ್ಟ್‌ಪ್ಯಾಕ್ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 253 ರನ್ ಪೇರಿಸಿತು. ದಕ್ಷಿಣ ಆಫ್ರಿಕಾ 45.2 ಓವರ್‌ಗಳಲ್ಲಿ 4 ವಿಕೆಟ್‌ಗೆ 254 ರನ್ ಗಳಿಸಿ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಪಡೆಯಿತು.ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 35 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಜೊತೆಯಾದ ವಿಲಿಯರ್ಸ್ ಮತ್ತು ಜೆಪಿ ಡುಮಿನಿ (46) ನಾಲ್ಕನೇ ವಿಕೆಟ್‌ಗೆ 90 ರನ್ ಸೇರಿಸಿದರು. ವಿಲಿಯರ್ಸ್ ಆ ಬಳಿಕ ಫಾಫ್ ಡು ಪ್ಲೆಸಿಸ್ (ಅಜೇಯ 66, 49 ಎಸೆತ, 9 ಬೌಂ, 1 ಸಿಕ್ಸರ್) ಜೊತೆ ಸೇರಿಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.106 ಎಸೆತಗಳನ್ನು ಎದುರಿಸಿದ ವಿಲಿಯರ್ಸ್ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದರು. ಮೊದಲು ಬ್ಯಾಟ್ ಮಾಡಿದ ಕಿವೀಸ್ ಬ್ರೆಂಡನ್ ಮೆಕ್ಲಮ್ (56) ಮತ್ತು ಕೇನ್ ವಿಲಿಯಮ್ಸನ್ (55) ಅವರ ಅರ್ಧಶತಕದ ನೆರವಿನಿಂದ ಸಾಧಾರಣ ಮೊತ್ತ ಪೇರಿಸಿತು.ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 253 (ರಾಬ್ ನಿಕೋಲ್ 30, ಬ್ರೆಂಡನ್ ಮೆಕ್ಲಮ್ 56, ಕೇನ್ ವಿಲಿಯಮ್ಸನ್ 55, ಜೇಮ್ಸ ಫ್ರಾಂಕ್ಲಿನ್ 32, ಲೋನ್ವಾಬೊ ಸೊಸೊಬೆ 41ಕ್ಕೆ 2, ಮಾರ್ನ್ ಮಾರ್ಕೆಲ್ 49ಕ್ಕೆ 2, ರಾಬಿನ್ ಪೀಟರ್‌ಸನ್ 45ಕ್ಕೆ 2, ಜಾಕ್ ಕಾಲಿಸ್ 45ಕ್ಕೆ 2). ದಕ್ಷಿಣ ಆಫ್ರಿಕಾ: 45.2 ಓವರ್‌ಗಳಲ್ಲಿ 4 ವಿಕೆಟ್‌ಗೆ 254 (ಜೆಪಿ ಡುಮಿನಿ 46, ಎಬಿ ಡಿವಿಲಿಯರ್ಸ್ ಔಟಾಗದೆ 106, ಫಾಫ್ ಡು ಪ್ಲೆಸಿಸ್ ಔಟಾಗದೆ 66, ಕೈಲ್ ಮಿಲ್ಸ್ 27ಕ್ಕೆ 1). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್ ಜಯ; ಪಂದ್ಯಶ್ರೇಷ್ಠ: ಎಬಿ ಡಿವಿಲಿಯರ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry