ಭಾನುವಾರ, ಸೆಪ್ಟೆಂಬರ್ 22, 2019
22 °C

ಕ್ರಿಕೆಟ್: ಏರ್ ಇಂಡಿಯಾಗೆ ಜಯ

Published:
Updated:

ಬೆಂಗಳೂರು: ಮೊಹಮ್ಮದ್ ಕೈಫ್ (82) ಹಾಗೂ ರಾಬಿನ್ ಉತ್ತಪ್ಪ (57) ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಬಿಸಿಸಿಐ ಕಾರ್ಪೊರೇಟ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಲ್ ಇಂಡಿಯಾ ಎಲೆಕ್ಟ್ರಿಸಿಟಿ ಬೋರ್ಡ್ (ಎಐಇಬಿ) ಎದುರು 245 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ ನೀಡಿದ 324 ರನ್‌ಗಳಿಗೆ ಉತ್ತರವಾಗಿ ಎಐಇಬಿ ತಂಡದವರು 20.4 ಓವರ್‌ಗಳಲ್ಲಿ 79 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡರು.ಎಸ್‌ಬಿಎಂಗೆ ಜಯ (ಚೆನ್ನೈ ವರದಿ): ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ತಂಡದ ವರು ಚೆನ್ನೈನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ್ ಪೆಟ್ರೋಲಿಯಂ ಲಿಮಿಟೆಡ್ ತಂಡವನ್ನು 57 ರನ್‌ಗಳಿಂದ ಸೋಲಿಸಿದರು.ಸಂಕ್ಷಿಪ್ತ ಸ್ಕೋರ್: ಏರ್ ಇಂಡಿಯಾ: 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 324 (ಪಾಲ್ ವಲ್ತಾಟಿ 46, ರಾಬಿನ್ ಉತ್ತಪ್ಪ 57, ಮೊಹಮ್ಮದ್ ಕೈಫ್ 82, ರಶ್ಮಿ ರಂಜನ್ ಪರೀದಾ 54; ಅಶೋಕ್ ದಿಂಡಾ 70ಕ್ಕೆ2, ಶಿವ ಶಂಕರ್ ಪಾಲ್ 59ಕ್ಕೆ3, ಅಂಜುಕ್ ಜುಂಡ್ 40ಕ್ಕೆ3); ಆಲ್ ಇಂಡಿಯಾ ಎಲೆಕ್ಟ್ರಿಸಿಟಿ ಬೋರ್ಡ್ (ಎಐಇಬಿ): 20.4 ಓವರ್‌ಗಳಲ್ಲಿ 79 (ವೃದ್ಧಿಮಾನ್ ಸಹಾ 16, ದೇವವೃತ ದಾಸ್ 17; ಪ್ರದೀಪ್ ಸಾಂಗ್ವಾನ್ 8ಕ್ಕೆ2, ಅಜಿತ್ ಚಂದೇಲಾ 21ಕ್ಕೆ4): ಫಲಿತಾಂಶ: ಏರ್ ಇಂಡಿಯಾಕ್ಕೆ 245 ರನ್ ಜಯ.ಎಸ್‌ಬಿಎಂ: 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 306 (ಮಂಜುನಾಥ್ 55, ಶಿಶಿರ್ ಭವನ್ 56, ಅನಿರುಧ್ ಜೋಶಿ  ಔಟಾಗದೆ 109, ತಿಲಕ್ ನಾಯ್ಡು ಔಟಾಗದೆ 61); ಬಿಪಿಸಿಎಲ್: 249 (ಶಿತಾಂಶು ಕೋಟಕ್ 33, ಓಂಕಾರ್ ಖಾನ್ವಿಲ್ಕರ್ 61; ಎಸ್.ಅರವಿಂದ್ 50ಕ್ಕೆ5)

Post Comments (+)