ಕ್ರಿಕೆಟ್: ಕರ್ನಾಟಕ ತಂಡಕ್ಕೆ ಗೆಲುವು

7

ಕ್ರಿಕೆಟ್: ಕರ್ನಾಟಕ ತಂಡಕ್ಕೆ ಗೆಲುವು

Published:
Updated:

ಚೆನ್ನೈ (ಐಎಎನ್‌ಎಸ್): ಭಾರತ ಟ್ವೆಂಟಿ-20 ತಂಡಕ್ಕೆ ಹಿಂದಿರುಗಿರುವ ರಾಬಿನ್ ಉತ್ತಪ್ಪ (59; 29 ಎಸೆತ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ  ನಡೆಯುತ್ತಿರುವ ದಕ್ಷಿಣ ವಲಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಸೋಲಿಸಿದ್ದಾರೆ.ಮಂಗಳವಾರ ನಡೆದ ಈ ಪಂದ್ಯದಲ್ಲಿ ತಮಿಳುನಾಡು ನೀಡಿದ 132 ರನ್‌ಗಳ ಗುರಿಯನ್ನು ಕರ್ನಾಟಕ 16.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು. ಕರ್ನಾಟಕಕ್ಕೆ ಲಭಿಸುತ್ತಿರುವ ಮೂರನೇ ಗೆಲುವು ಇದಾಗಿದೆ. ಈ ಮೊದಲು ಗೋವಾ ಹಾಗೂ ಕೇರಳ ಎದುರು ಗೆಲುವು ಸಾಧಿಸಿದ್ದರು.ರಾಬಿನ್ ಅವರ ಇನಿಂಗ್ಸ್‌ನಲ್ಲಿ ಮೂರು ಭರ್ಜರಿ ಸಿಕ್ಸರ್‌ಗಳು ಹಾಗೂ ಏಳು ಬೌಂಡರಿಗಳಿದ್ದವು. ಮಯಾಂಕ್ ಅಗರ್‌ವಾಲ್ (15) ಮೊದಲ ವಿಕೆಟ್‌ಗೆ 46 ಎಸೆತಗಳಲ್ಲಿ ಜೊತೆ 77 ರನ್ ಸೇರಿಸಿದರು. ಭರತ್ ಚಿಪ್ಲಿ (ಔಟಾಗದೆ 38; 29 ಎಸೆತ) ಕೂಡ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.ಇದಕ್ಕೂ ಮೊದಲು ಬೌಲಿಂಗ್‌ನಲ್ಲಿ ಕರ್ನಾಟಕ ತಂಡದ  ಸ್ಟುವರ್ಟ್ ಬಿನ್ನಿ (17ಕ್ಕೆ3) ಹಾಗೂ ಕೆ.ಪಿ.ಅಪ್ಪಣ್ಣ (27ಕ್ಕೆ2) ಮಿಂಚಿದ್ದರು.ಸಂಕ್ಷಿಪ್ತ ಸ್ಕೋರ್: ತಮಿಳುನಾಡು: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131
(ದಿನೇಶ್ ಕಾರ್ತಿಕ್ 52, ಶ್ರೀವಾಸುದೇವದಾಸ್ ಔಟಾಗದೆ 30; ಸ್ಟುವರ್ಟ್ ಬಿನ್ನಿ 17ಕ್ಕೆ3, ಕೆ.ಪಿ.ಅಪ್ಪಣ್ಣ 27ಕ್ಕೆ2);

 

ಕರ್ನಾಟಕ: 16.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 135 (ರಾಬಿನ್ ಉತ್ತಪ್ಪ 59, ಭರತ್ ಚಿಪ್ಲಿ ಔಟಾಗದೆ 38, ಗಣೇಶ್ ಸತೀಶ್ ಔಟಾಗದೆ 18): ಫಲಿತಾಂಶ: ಕರ್ನಾಟಕಕ್ಕೆ ಎಂಟು ವಿಕೆಟ್ ಗೆಲುವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry