ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮಣಿದ ಗೋವಾ

7

ಕ್ರಿಕೆಟ್: ಕರ್ನಾಟಕ ತಂಡಕ್ಕೆ ಮಣಿದ ಗೋವಾ

Published:
Updated:

ವಿಜಯವಾಡ: ನಾಯಕಿ ಜಿ.ದಿವ್ಯಾ (ಔಟಾಗದೆ 53) ಅವರ ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 19 ವರ್ಷ ವಯಸ್ಸಿನೊಳಗಿನವರ ಯುವತಿಯರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ತಂಡವನ್ನು ಮಣಿಸಿದ್ದಾರೆ.ಮಂಗಳವಾರ ನಡೆದ ಪಂದ್ಯದಲ್ಲಿ ಗೋವಾ ನೀಡಿದ 82 ರನ್‌ಗಳ ಗುರಿಯನ್ನು ಕರ್ನಾಟಕ 21.5 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ತಲುಪಿತು.ಸಂಕ್ಷಿಪ್ತ ಸ್ಕೋರ್: ಗೋವಾ: 37.4 ಓವರ್‌ಗಳಲ್ಲಿ 81 (ಸಹನಾ ಎಸ್.ಪವಾರ್ 18ಕ್ಕೆ2, ಸಿಮ್ರೆನ್ ಹೆನ್ರಿ 10ಕ್ಕೆ2, ಜಿ.ರಾಮೇಶ್ವರಿ 11ಕ್ಕೆ3); ಕರ್ನಾಟಕ: 21.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 (ಜಿ.ದಿವ್ಯಾ ಔಟಾಗದೆ 53). ಫಲಿತಾಂಶ: ಕರ್ನಾಟಕ ತಂಡಕ್ಕೆ 8 ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry