ಕ್ರಿಕೆಟ್: ಕರ್ನಾಟಕ ತಂಡಕ್ಕೆ ಸೋಲು

7

ಕ್ರಿಕೆಟ್: ಕರ್ನಾಟಕ ತಂಡಕ್ಕೆ ಸೋಲು

Published:
Updated:

ಇಂದೋರ್: ಈಶ್ವರ್ ಚೌದ್ರಿ ಅವರ ಕರಾರುವಾಕ್ಕಾದ ಬೌಲಿಂಗ್ (31ಕ್ಕೆ4) ದಾಳಿಗೆ ನಲುಗಿದ ಕರ್ನಾಟಕ ತಂಡದವರು ಇಲ್ಲಿ ಮಂಗಳವಾರ ನಡೆದ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ಎದುರು 32 ರನ್‌ಗಳಿಂದ ಸೋಲು ಅನುಭವಿಸಿದರು.ಗುಜರಾತ್ 42.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 168 ರನ್ ಗಳಿಸಿತು. ಅಲ್ಪ ಮೊತ್ತಕ್ಕೆ ಉತ್ತರ ನೀಡುವಲ್ಲಿ ಎಡವಿದ ಕರ್ನಾಟಕ 31.5 ಓವರ್‌ಗಳಲ್ಲಿ 136 ರನ್ ಗಳಿಸಿ ಆಲ್‌ಔಟ್ ಆಯಿತು.ಸಂಕ್ಷಿಪ್ತ ಸ್ಕೋರ್: ಗುಜರಾತ್ 42.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 168 (ಪಾರ್ಥಿವ್ ಪಟೇಲ್ 24, ಮನ್‌ಪ್ರೀತ್ ಜುನೇಜಾ ಔಟಾಗದೇ 49, ಪಾರ್ಥ್ ಪಾರೀಕ್ 27; ಆರ್. ವಿನಯ್ ಕುಮಾರ್ 39ಕ್ಕೆ2, ಎಸ್. ಅರವಿಂದ್ 22ಕ್ಕೆ3).ಕರ್ನಾಟಕ: 31.5 ಓವರ್‌ಗಳಲ್ಲಿ 136. (ಭರತ್ ಚಿಪ್ಲಿ 40, ಮನೀಷ್ ಪಾಂಡೆ 31, ಸಿ.ಎಂ. ಗೌತಮ್ 21; ಅಮಿತ್ ಸಿಂಗ್ 37ಕ್ಕೆ2, ಈಶ್ವರ್ ಚೌದ್ರಿ 31ಕ್ಕೆ4).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry