ಭಾನುವಾರ, ಜನವರಿ 19, 2020
29 °C

ಕ್ರಿಕೆಟ್: ಕಾಲಿಸ್, ಪೀಟರ್‌ಸನ್ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್: ಜಾಕ್ ಕಾಲಿಸ್ (ಬ್ಯಾಟಿಂಗ್ 159) ಮತ್ತು ಅಲ್ವಿರೊ ಪೀಟರ್‌ಸನ್ (109) ಗಳಿಸಿದ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಮಂಗಳವಾರ ಆರಂಭವಾದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿದೆ.ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಮೊದಲ ದಿನ ಮಂಗಳವಾರದ ಆಟದ ಅಂತ್ಯಕ್ಕೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 3 ವಿಕೆಟ್‌ಗೆ 347 ರನ್ ಪೇರಿಸಿದೆ.188 ಎಸೆತಗಳನ್ನು ಎದುರಿಸಿದ ಪೀಟರ್‌ಸನ್ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.

ಇದುವರೆಗೆ 215 ಎಸೆತಗಳನ್ನು ಎದುರಿಸಿರುವ ಜಾಕ್ ಕಾಲಿಸ್ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ 21 ಬೌಂಡರಿಗಳು ಒಳಗೊಂಡಿವೆ.ಕಾಲಿಸ್ ಮತ್ತು ಪೀಟರ್‌ಸನ್ ಮೂರನೇ ವಿಕೆಟ್‌ಗೆ 205 ರನ್‌ಗಳನ್ನು ಸೇರಿಸಿದ್ದು ದಕ್ಷಿಣ ಆಫ್ರಿಕಾ ತಂಡದ ಉತ್ತಮ ಮೊತ್ತಕ್ಕೆ ಕಾರಣ. ದಿನದಾಟದ ಅಂತ್ಯಕ್ಕೆ 45 ರನ್ ಗಳಿಸಿದ ಎಬಿ ಡಿವಿಲಿಯರ್ಸ್ ಅವರು ಕಾಲಿಸ್ ಜೊತೆ ಕ್ರೀಸ್‌ನಲ್ಲಿದ್ದರು.ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ 3 ವಿಕೆಟ್‌ಗೆ 347 (ಗ್ರೇಮ್ ಸ್ಮಿತ್16, ಅಲ್ವಿರೊ ಪೀಟರ್‌ಸನ್ 109, ಹಾಶಿಮ್ ಆಮ್ಲಾ 16, ಜಾಕ್ ಕಾಲಿಸ್ ಬ್ಯಾಟಿಂಗ್ 159, ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ 45,    ಧಮ್ಮಿಕಾ      ಪ್ರಸಾದ್ 85ಕ್ಕೆ 2).

ಪ್ರತಿಕ್ರಿಯಿಸಿ (+)