ಕ್ರಿಕೆಟ್: ಕೆಎಸ್‌ಸಿಎ ಇಲೆವೆನ್‌ಗೆ ಜಯ

ಶುಕ್ರವಾರ, ಮೇ 24, 2019
26 °C

ಕ್ರಿಕೆಟ್: ಕೆಎಸ್‌ಸಿಎ ಇಲೆವೆನ್‌ಗೆ ಜಯ

Published:
Updated:

ಬೆಂಗಳೂರು: ಎದುರಾಳಿ ಬ್ಯಾಟ್ಸ್ ಮನ್‌ಗಳನ್ನು ಮತ್ತೊಮ್ಮೆ ಕಾಡಿದ ಕೆ. ಗೌತಮ್ (49ಕ್ಕೆ6) ಇಲ್ಲಿ ಕೊನೆಗೊಂಡ ಶಫಿ ದಾರಾಶಾ ಅಖಿಲ ಭಾರತ ಆಹ್ವಾನಿತ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ `ಎ~ ವಿರುದ್ಧದ ಪಂದ್ಯದಲ್ಲಿ ಕೆಎಸ್‌ಸಿಎ ಇಲೆವೆನ್‌ಗೆ ಭರ್ಜರಿ ಜಯ ತಂದುಕೊಟ್ಟರು.

ಆಲೂರು ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ `ಬಾಂಗ್ಲಾ~ ತಂಡಕ್ಕೆ ಎರಡನೇ

ಇನಿಂಗ್ಸ್ ನಲ್ಲೂ ಗೌತಮ್ ಕಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಕಬಳಿಸಿದ್ದ ಅವರು ಎರಡನೇ ಇನಿಂಗ್ಸ್ ನಲ್ಲೂ ಬಾಂಗ್ಲಾಕ್ಕೆ ಆಘಾತ ನೀಡಿದರು.

ಇನ್ನೊಂದು ಪಂದ್ಯದಲ್ಲಿ ಕೆಎಸ್‌ಸಿಎ ಕೋಲ್ಟ್ಸ್ ಮೊದಲ ಇನಿಂಗ್ಸ್‌ನಲ್ಲಿ 100.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬರೋಡ 144 ರನ್ ಗಳಿಸಿದಾಗ ಮತ್ತೆ ಬಂದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಬುಧವಾರ ಕೂಡಾ ಮಳೆ ಹಾಗೂ ಮಂದ ಬೆಳಕು ಪಂದ್ಯಕ್ಕೆ ಅಡ್ಡಿಯಾಗಿತ್ತು.

ಸಂಕ್ಷಿಪ್ತ ಸ್ಕೋರು: ಕೆಎಸ್‌ಸಿ ಇಲೆವೆನ್ 89.1 ಓವರ್‌ಗಳಲ್ಲಿ 284 ಮತ್ತು 66.4 ಓವರ್‌ಗಳಲ್ಲಿ 284ಕ್ಕೆ 7 ಡಿಕ್ಲೇರ್. ಬಾಂಗ್ಲಾದೇಶ `ಎ~ 68.5 ಓವರ್‌ಗಳಲ್ಲಿ 214. ಮತ್ತು 58.4 ಓವರ್‌ಗಳಲ್ಲಿ 199. (ಮಹಮ್ಮದ್ ಇಮ್ರಾನ್ ಕಯಾಸ್ 45, ಮಹಮ್ಮದ್ ನಯೀಮ್ ಇಸ್ಲಾಮ್ 88; ಕೆ. ಗೌತಮ್ 49ಕ್ಕೆ6). ಕೆಎಸ್‌ಸಿಎ ಇಲೆವೆನ್‌ಗೆ 5 ಪಾಯಿಂಟ್ಸ್. ಬಾಂಗ್ಲಾದೇಶ `ಎ~  0 ಪಾಯಿಂಟ್.

ಕೆಎಸ್‌ಸಿಎ ಕೋಲ್ಟ್ಸ್: 100.3 ಓವರ್‌ಗಳಲ್ಲಿ 9 ವಿಕೆಟ್‌ಗೆ 279 ಡಿಕ್ಲೇರ್. ಬರೋಡಾ ಕ್ರಿಕೆಟ್ ಸಂಸ್ಥೆ 39.2 ಓವರ್‌ಗಳಲ್ಲಿ 144ಕ್ಕೆ4 (ಆದಿತ್ಯ ವಾಗ್ಮೊರೆ 52, ಅಂಬಟಿ ರಾಯುಡು ಅಜೇಯ 37; ಸುನಿಲ್ ರಾಜು 39ಕ್ಕೆ2). ಕೆಎಸ್‌ಸಿಎ ಕೋಲ್ಟ್ ಹಾಗೂ ಬರೋಡಾ ಕ್ರಿಕೆಟ್ ಸಂಸ್ಥೆಗೆ ತಲಾ 1 ಪಾಯಿಂಟ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry