ಕ್ರಿಕೆಟ್: ಕೆಎಸ್‌ಸಿಎ ಇಲೆವೆನ್ ತಂಡದ ಬೃಹತ್ ಮೊತ್ತ

ಸೋಮವಾರ, ಮೇ 27, 2019
24 °C

ಕ್ರಿಕೆಟ್: ಕೆಎಸ್‌ಸಿಎ ಇಲೆವೆನ್ ತಂಡದ ಬೃಹತ್ ಮೊತ್ತ

Published:
Updated:

ಬೆಂಗಳೂರು: ಅಮಿತ್ ವರ್ಮಾ (219) ಅವರ ದ್ವಿಶತಕದ ನೆರವಿನಿಂದ ಕೆಎಸ್‌ಸಿಎ ಇಲೆವೆನ್ ತಂಡ ಶಫಿ ದಾರಾಶಾ ಅಖಿಲ ಭಾರತ ಆಹ್ವಾನಿತ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ಎದುರು ಬೃಹತ್ ಮೊತ್ತ ಕಲೆ ಹಾಕಿದೆ.ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಎಸ್‌ಸಿಎ ಎರಡನೇ ದಿನವಾದ ಭಾನುವಾರದ ಆಟದ ಅಂತ್ಯಕ್ಕೆ 179 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 556 ರನ್ ಗಳಿಸಿದೆ.  ಮೊದಲ ದಿನದಾಟದ ಅಂತ್ಯಕ್ಕೆ 65 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಅಮಿತ್ ಎರಡನೇ ದಿನ ಎದುರಾಳಿ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.ಸಂಕ್ಷಿಪ್ತ ಸ್ಕೋರು: ಕೆಎಸ್‌ಸಿಎ ಇಲೆವೆನ್ 179 ಓವರ್‌ಗಳಲ್ಲಿ 9 ವಿಕೆಟ್‌ಗೆ 556. (ಅಮಿತ್ ವರ್ಮಾ 219, ಸಿ.ಎಂ. ಗೌತಮ್ 57, ರಾಜು ಭಟ್ಕಳ್ 40, ಕೆ. ಗೌತಮ್ 82; ಅಭಿಷೇಕ್ ನಾಯರ್ 62ಕ್ಕೆ2, ರಾಕೇಶ್ ಪ್ರಭು 71ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry