ಬುಧವಾರ, ಅಕ್ಟೋಬರ್ 16, 2019
26 °C

ಕ್ರಿಕೆಟ್; ಜಯ್ ಶತಕ: ಸೌರಾಷ್ಟ್ರಕ್ಕೆ ಮೂರು ಅಂಕ

Published:
Updated:

ಮೈಸೂರು: ಭರ್ಜರಿ ಶತಕ ಗಳಿಸಿದ ಜಯ್ ಚೌಹಾಣ್ (138; 189 ಎಸೆತ, 16ಬೌಂಡರಿ) ನೆರವಿನಿಂದ ಭಾನುವಾರ ಮುಕ್ತಾಯವಾದ ಕೂಚ್ ಬಿಹಾರಿ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರವು, ಕರ್ನಾಟಕ ವಿರುದ್ಧದ ಪಂದ್ಯದಲ್ಲಿ   ಮೂರು ಪಾಯಿಂಟ್ ಗಳಿಸಿತು.ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕವು ನೀಡಿದ್ದ 484 ರನ್ ಮೊತ್ತವನ್ನು ಭಾನುವಾರ ದಾಟಿದ ಸೌರಾಷ್ಟ್ರವು ಒಟ್ಟು 514 ರನ್ ಗಳಿಸಿ ಆಲೌಟ್ ಆಯಿತು. ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು 49 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು.ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಶ್ರೇಯಸ್ ಗೋಪಾಲ್ (70; 123ಎಸೆತ, 6ಬೌಂಡರಿ)      ಮತ್ತೆ ಅರ್ಧಶತಕ ಗಳಿಸಿದರು. ಇದಕ್ಕೂ ಮುನ್ನ ಬೌಲಿಂಗ್‌ನಲ್ಲೂ (124ಕ್ಕೆ4) ಮಿಂಚಿದ್ದರು. ಕರ್ನಾಟಕ ಒಂದು ಪಾಯಿಂಟ್‌ಗೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.ಸ್ಕೋರ್:  ಕರ್ನಾಟಕ 484ಡಿ ಮತ್ತು 49 ಓವರ್‌ಗಳಲ್ಲಿ 3 ವಿಕೆಟ್‌ಗೆ 163: (ಆರ್. ಸಮರ್ಥ 46, ಶ್ರೇಯಸ್ ಗೋಪಾಲ್ 70, ಕೆ.ವಿ. ಸಿದ್ಧಾರ್ಥ 27, ಕ್ರಾಂತಿಕುಮಾರ್ 10)

ಸೌರಾಷ್ಟ್ರ:  167.5 ಓವರ್‌ಗಳಲ್ಲಿ 514 (ಜಯ್ ಚೌಹಾಣ್ 138, ಪ್ರೇರಕ್‌ಮಂಕಡ್ 46, ರವಿ ವಸೋದಯ್ 17, ಮೊಹ್ಮದ್ ತಹಾ 98ಕ್ಕೆ3, ಶ್ರೇಯಸ್‌ಗೋಪಾಲ್ 124ಕ್ಕೆ4).

ಫಲಿತಾಂಶ: ಪಂದ್ಯ ಡ್ರಾ. ಸೌರಾಷ್ಟ್ರಕ್ಕೆ 3 ಮತ್ತು ಕರ್ನಾಟಕಕ್ಕೆ 1 ಪಾಯಿಂಟ್. 

Post Comments (+)