ಕ್ರಿಕೆಟ್: ಜವಾಹರ್ ತಂಡಕ್ಕೆ ಪ್ರಶಸ್ತಿ

7

ಕ್ರಿಕೆಟ್: ಜವಾಹರ್ ತಂಡಕ್ಕೆ ಪ್ರಶಸ್ತಿ

Published:
Updated:

ಧಾರವಾಡ: ಕೆ.ಸಿ. ಅವಿನಾಶ ಅರ್ಧ ಶತಕ ಹಾಗೂ ಸಾಹಿಲ್ ಸಲೀಂ (24ಕ್ಕೆ4) ಅವರ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಬೆಂಗಳೂರಿನ ಜವಾಹರ್ಸ್‌ ಸ್ಪೋರ್ಟ್ಸ್ ಕ್ಲಬ್ (ಜೆಎಸ್‌ಸಿ) ತಂಡ ಪರೇಶ ನೇರ್ಲೇಕರ್ ಸ್ಮಾರಕ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಧಾರವಾಡದ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ತಂಡವನ್ನು ಒಂಬತ್ತು ರನ್‌ಗಳಿಂದ ಪರಾಭವಗೊಳಿಸಿತು.ಕರ್ನಾಟಕ ಕ್ರಿಕೆಟ್ ಕ್ಲಬ್ (ಸಿಸಿಕೆ) ಆತಿಥ್ಯದಲ್ಲಿ ಆರ್.ಎನ್. ಶೆಟ್ಟಿ  ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಜವಾಹರ್ಸ್‌ ತಂಡ ಮೊದಲು ಬ್ಯಾಟ್ ಮಾಡಿ ಗೆಲ್ಲಲು ಎದುರಾಳಿಗೆ 196 ರನ್‌ಗಳ ಸವಾಲು ಎಸೆಯಿತು. ಎಸ್ ಡಿಎಂ ಕ್ರಿಕೆಟ್ ಅಕಾಡೆಮಿ ತಂಡ ಮೊದಲ ವಿಕೆಟ್‌ಗೆ 84 ರನ್ ಕಲೆಹಾಕಿ ಗೆಲುವಿ ನತ್ತ ಮುನ್ನುಗ್ಗಿತ್ತು. ಆದರೆ, ಸಾಹಿಲ್ ಸಲೀಂ ಅವರ ಕರಾರುವಾಕ್ ದಾಳಿಗೆ ಆ ತಂಡಕ್ಕೆ ನಿಗದಿತ 40 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 186 ರನ್ ಮಾತ್ರ ಗಳಿಸಿತು.ಸ್ಕೋರ್: ಜವಾಹರ್ಸ್‌ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು: 37.1 ಓವರ್‌ಗಳಲ್ಲಿ 195 (ಕೆ.ಸಿ. ಅವಿನಾಶ 51, ಶೋಯಬ್ ಮ್ಯಾನೇಜರ್ 48, ಗಣೇಶ ಐಹೊಳೆ 35ಕ್ಕೆ2, ಮೊಹಮ್ಮದ್ ಅಲಿ ಖಾನ್ 42ಕ್ಕೆ2) ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ: 40 ಓವರ್‌ಗಳಲ್ಲಿ 8 ವಿಕೆಟ್‌ಗೆ 186 (ಶಿವಾಜಿ ವಡ್ಡರ್ 47, ಕೆ.ಬಿಪಿನ್ 45, ಸಾಹಿಲ್ ಸಲೀಂ 24ಕ್ಕೆ4).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry