ಕ್ರಿಕೆಟ್ ಟೆಸ್ಟ್: ಭಾರತ ಎ ತಂಡದ ಮೇಲುಗೈ

7

ಕ್ರಿಕೆಟ್ ಟೆಸ್ಟ್: ಭಾರತ ಎ ತಂಡದ ಮೇಲುಗೈ

Published:
Updated:

ಲಿಂಕನ್, ನ್ಯೂಜಿಲೆಂಡ್ (ಪಿಟಿಐ): ಭಾರತ `ಎ~ ತಂಡದವರು ನ್ಯೂಜಿಲೆಂಡ್ `ಎ~ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.ಅಭಿನವ್ ಮುಕುಂದ್ ನೇತೃತ್ವದ ಭಾರತ 118 ಓವರ್‌ಗಳಲ್ಲಿ 8 ವಿಕೆಟ್‌ಗೆ 554 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆತಿಥೇಯ ತಂಡ ಎರಡನೇ ದಿನವಾದ ಗುರುವಾರದ ಆಟದ ಅಂತ್ಯಕ್ಕೆ 48.1 ಓವರ್‌ಗಳಲ್ಲಿ 5 ವಿಕೆಟ್‌ಗೆ 198 ರನ್ ಗಳಿಸಿತ್ತು. ಆರ್. ವಿನಯ್ ಕುಮಾರ್ (36ಕ್ಕೆ 2) ಮತ್ತು ಭುವನೇಶ್ವರ್ ಕುಮಾರ್ (57ಕ್ಕೆ 2) ಅವರು ಎದುರಾಳಿ ತಂಡದ ಕುಸಿತಕ್ಕೆ ಕಾರಣರಾದರು.ಇದಕ್ಕೂ ಮುನ್ನ 4 ವಿಕೆಟ್‌ಗೆ 433 ರನ್‌ಳಿಂದ ದಿನದಾಟ ಮುಂದುವರಿಸಿದ ಭಾರತ ಬೃಹತ್ ಮೊತ್ತ ಕಲೆಹಾಕಿತು. ಆದರೆ ಮೊದಲ ದಿನ ಔಟಾಗದೆ ಉಳಿದಿದ್ದ ಮನ್‌ದೀಪ್ ಸಿಂಗ್ (193) ಮತ್ತು ಅಶೋಕ್ ಮೆನೇರಿಯಾ (173) ದ್ವಿಶತಕ ಗಳಿಸಲು ವಿಫಲರಾದರು. ವಿನಯ್ ಕುಮಾರ್ 41 ಎಸೆತಗಳಲ್ಲಿ 50 ರನ್ (5 ಬೌಂ, 3 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.ಸಂಕ್ಷಿಪ್ತ ಸ್ಕೋರ್: ಭಾರತ `ಎ~: ಮೊದಲ ಇನಿಂಗ್ಸ್ 118 ಓವರ್‌ಗಳಲ್ಲಿ 8 ವಿಕೆಟ್‌ಗೆ 554 (ಮನ್‌ದೀಪ್ ಸಿಂಗ್ 193, ಅಶೋಕ್ ಮೆನೇರಿಯಾ 173, ಆರ್. ವಿನಯ್ ಕುಮಾರ್ ಔಟಾಗದೆ 50, ಬ್ರೆಂಟ್ ಅರ್ನೆಲ್ 94ಕ್ಕೆ 3). ನ್ಯೂಜಿಲೆಂಡ್ `ಎ~: ಮೊದಲ ಇನಿಂಗ್ಸ್ 48.1 ಓವರ್‌ಗಳಲ್ಲಿ 5 ವಿಕೆಟ್‌ಗೆ 198 (ಹಾಮಿಷ್ ರುದರ್‌ಫರ್ಡ್ 99, ರೀಸ್ ಯಂಗ್ 22, ವಿನಯ್ ಕುಮಾರ್ 36ಕ್ಕೆ 5, ಭುವನೇಶ್ವರ್ ಕುಮಾರ್ 57ಕ್ಕೆ 2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry