ಕ್ರಿಕೆಟ್: ತಿರುಗೇಟು ನೀಡಿದ ದಕ್ಷಿಣ ವಲಯ

7

ಕ್ರಿಕೆಟ್: ತಿರುಗೇಟು ನೀಡಿದ ದಕ್ಷಿಣ ವಲಯ

Published:
Updated:

ವಿಶಾಖಪಟ್ಟಣ (ಪಿಟಿಐ): ಪರಾಸ್ ಡೋಗ್ರಾ ಗಳಿಸಿದ ಶತಕದ (167) ನೆರವಿನಿಂದ ಉತ್ತಮ ಮೊತ್ತದತ್ತ ದಾಪುಗಾಲು ಹಾಕಿದ್ದ ಉತ್ತರ ವಲಯ ತಂಡಕ್ಕೆ ಪ್ರತಿಯಾಗಿ ತಿರುಗೇಟು ನೀಡಿರುವ ದಕ್ಷಿಣ ವಲಯ ತಂಡ ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ  70 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 298 ರನ್ ಕಲೆ ಹಾಕಿದೆ.ಮೊದಲ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿದ್ದ ಉತ್ತರ ವಲಯ ಗುರುವಾರವು ಆಟ ಮುಂದುವರಿಸಿ 106.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 337 ರನ್‌ಗಳ ಬೃಹತ್ ಮೊತ್ತದ ಸವಾಲನ್ನು ಮುಂದಿರಿಸಿತು.ಸಂಕ್ಷಿಪ್ತ ಸ್ಕೋರ್: ಉತ್ತರ ವಲಯ 106.1 ಓವರ್‌ಗಳಲ್ಲಿ 337. (ಪರಾಸ್ ಡೋಗ್ರಾ 167, ಜೋಗಿಂದರ್ ಶರ್ಮಾ 30, ಸುಮಿತ್ ನರ್ವಾಲ್ 15; ಆರ್. ವಿನಯ್ ಕುಮಾರ್ 60ಕ್ಕೆ2, , ಪ್ರಗ್ಯಾನ್ ಓಜಾ 49ಕ್ಕೆ3, ಎಸ್. ಅರವಿಂದ್ 56ಕ್ಕೆ3, ಅಭಿನವ್ ಮುಕುಂದ್ 39ಕ್ಕೆ1).ದಕ್ಷಿಣ ವಲಯ 70 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 298. (ಅಭಿನವ್ ಮುಕುಂದ್ 34, ರಾಬಿನ್ ಉತ್ತಪ್ಪ 66, ಎಸ್. ಬದರೀನಾಥ್ ಬ್ಯಾಟಿಂಗ್ 97, ಮನೀಷ್ ಪಾಂಡೆ 74; ಜೋಗಿಂದರ್ ಶರ್ಮಾ 27ಕ್ಕೆ1, ಸುಮಿತ್ ನರ್ವಾಲ್ 57ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry