ಕ್ರಿಕೆಟ್: ದಕ್ಷಿಣ ವಲಯಕ್ಕೆ ಸೋಲು

ಶುಕ್ರವಾರ, ಜೂಲೈ 19, 2019
28 °C

ಕ್ರಿಕೆಟ್: ದಕ್ಷಿಣ ವಲಯಕ್ಕೆ ಸೋಲು

Published:
Updated:

ಪುಣೆ (ಪಿಟಿಐ): ಅಭಿಷೇಕ್ ಬಾಡ್ಕರ್ (74) ಅವರ ಆಕರ್ಷಕ ಬ್ಯಾಟಿಂಗ್ ಬಲವಿದ್ದರೂ ದಕ್ಷಿಣ ವಲಯ ತಂಡದವರು ಜೆ.ಕೆ.ಬೋಸ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದಿಂದ ಉತ್ತರ ವಲಯ ವಿರುದ್ಧ ಸೋಲನುಭವಿಸಿತು.ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟ (ಎಸ್‌ಜೆಎಫ್‌ಐ) ಆಶ್ರಯದ ಈ ಟೂರ್ನಿಯ ಗುರುವಾರದ ಹಣಾಹಣಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ದಕ್ಷಿಣ ವಲಯ ಮೊದಲು ಬ್ಯಾಟ್ ಮಾಡಿ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು.

ಗುರಿಯನ್ನು ಬೆನ್ನ ಟ್ಟಿದ ಉತ್ತರ ವಲಯದವರು ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿದರು. ರೋಚಕ ಅಂತ್ಯ ಕಂಡ ಈ ಪಂದ್ಯದಲ್ಲಿ ಉತ್ತರ ವಲಯ ಐದು ವಿಕೆಟ್‌ಗಳ ನಷ್ಟಕ್ಕೆ 183 ರನ್ ಸೇರಿಸಿತು.ಸಂಕ್ಷಿಪ್ತ ಸ್ಕೋರ್: ದಕ್ಷಿಣ ವಲಯ: 20 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 180 (ತನ್ವೀರ್ 38, ಅಭಿಷೇಕ್ ಬಾಡ್ಕರ್ 74, ಮಲ್ಲಿಕಾಚರಣ್ ವಾಡಿ 26; ರಾಕೇಶ್ ತಪ್ಲಿಯಾಲ್ 36ಕ್ಕೆ2, ಅಮಿತ್ ಚೌಧರಿ 31ಕ್ಕೆ2); ಉತ್ತರ ವಲಯ: 20 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 183 (ಸಿದ್ದಾರ್ಥ್ ಶರ್ಮ 70, ಜಸ್ವಿಂದರ್ ಸಿದ್ದು 38, ಜಿ.ಎಸ್.ವಿವೇಕ್ 25; ಮಲ್ಲಿಕಾಚರಣ್ ವಾಡಿ 26ಕ್ಕೆ2);

ಪಂದ್ಯ ಶ್ರೇಷ್ಠ: ಸಿದ್ದಾರ್ಥ್ ಶರ್ಮ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry