ಕ್ರಿಕೆಟ್: ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

7

ಕ್ರಿಕೆಟ್: ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

Published:
Updated:

ಹರಾರೆ (ಎಎಫ್‌ಪಿ): ಪಾಕಿಸ್ತಾನದ ಪ್ರಬಲ ಬೌಲಿಂಗ್‌ ದಾಳಿಯನ್ನು ಎದು­ರಿಸಿ ನಿಲ್ಲಲು ಜಿಂಬಾಬ್ವೆ ಬ್ಯಾಟ್ಸ್‌ಮನ್‌­-ಗಳು ಚಡಪಡಿಸಿ ಹೋದರು. ಎರಡನೇ ಇನಿಂಗ್ಸ್‌ನಲ್ಲಿ ಆತಿಥೇಯರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಪಾಕ್‌ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ 221 ರನ್‌ಗಳ ಭರ್ಜರಿ ಗೆಲುವು ಪಡೆಯಿತು.ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಜಿಂಬಾಬ್ವೆ ಒಂದು ವಿಕೆಟ್‌ ನಷ್ಟಕ್ಕೆ 13 ರನ್ ಗಳಿಸಿತ್ತು. ಆದರೆ, ಕೊನೆಯ ದಿನದಾಟದ ಬೆಳಿಗ್ಗೆಯ ಅವಧಿಯ ಆಟ ಮುಗಿಯುವುದರೊಳಗೆ 120 ರನ್‌ಗೆ ಆಲ್‌ಔಟ್‌ ಆಯಿತು. ಎರಡೂ ಇನಿಂಗ್ಸ್‌ ಸೇರಿ ಸಯೀದ್‌ ಅಜ್ಮಲ್‌ 11 ವಿಕೆಟ್‌ ಉರುಳಿಸಿದರು.ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 90.1 ಓವರ್‌ಗಳಲ್ಲಿ 249 ಹಾಗೂ ಎರಡನೇ ಇನಿಂಗ್ಸ್‌ 149.3 ಓವರ್‌ಗಳಲ್ಲಿ 419.

ಜಿಂಬಾಬ್ವೆ ಪ್ರಥಮ ಇನಿಂಗ್ಸ್‌ 103.3 ಓವರ್‌ಗಳಲ್ಲಿ 327 ಮತ್ತು 46.4 ಓವರ್‌ಗಳಲ್ಲಿ 120. (ಸಿಕಂದರ್‌ ರಾಜಾ 24, ಎಲ್ಟಿನ್‌ ಚಿಗುಂಬುರಾ 28; ಸಯೀದ್‌ ಅಜ್ಮಲ್‌ 23ಕ್ಕೆ4, ಅಬ್ದುರ್‌ ರೆಹಮಾನ್‌ 36ಕ್ಕೆ4). ಫಲಿತಾಂಶ: ಪಾಕಿಸ್ತಾನಕ್ಕೆ 221 ರನ್‌ ಗೆಲುವು. ಪಂದ್ಯ ಶ್ರೇಷ್ಠ: ಯೂನಿಸ್‌ ಖಾನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry