ಮಂಗಳವಾರ, ಮೇ 17, 2022
26 °C

ಕ್ರಿಕೆಟ್: ಪಾಕ್‌ಗೆ ದಿನದ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಎಎಫ್‌ಪಿ): ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ ಮೇಲುಗೈ ಪಡೆದಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬುಧವಾರ ಶ್ರೀಲಂಕಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 239 ರನ್‌ಗಳಿಗೆ ನಿಯಂತ್ರಿಸಿದ ಪಾಕ್, ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ.ಮೊಹಮ್ಮದ್ ಹಫೀಜ್ (ಬ್ಯಾಟಿಂಗ್ 18) ಮತ್ತು ತೌಫೀಕ್ ಉಮರ್ (ಬ್ಯಾಟಿಂಗ್ 20) ಪಾಕ್ ತಂಡಕ್ಕೆ ಉತ್ತಮ ಆರಂಭದ ಸೂಚನೆ ನೀಡಿದ್ದಾರೆ.ಮೊದಲು ಬ್ಯಾಟ್ ಮಾಡಿದ ಲಂಕಾ ಸಯೀದ್ ಅಜ್ಮಲ್ (48ಕ್ಕೆ 3) ಹಾಗೂ ಉಮರ್ ಗುಲ್ (78ಕ್ಕೆ 3) ಬೌಲಿಂಗ್ ಮುಂದೆ ಪರದಾಟ ನಡೆಸಿತು. ಅಬ್ದುಲ್ ರಹ್ಮಾನ್ ಮತ್ತು ಜುನೈದ್ ಖಾನ್ ತಲಾ ಎರಡು ವಿಕೆಟ್ ಪಡೆದರು. ಲಂಕಾ ಪರ ಕುಮಾರ ಸಂಗಕ್ಕಾರ (78) ಮಾತ್ರ ಉತ್ತಮ ಪ್ರದರ್ಶನ ನೀಡಿದರು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 239 (ಕುಮಾರ ಸಂಗಕ್ಕಾರ 78, ಚಣಕ ವೆಲೆಗೆಡರ 48, ರಂಗನಾ ಹೆರಾತ್ 29, ಸಯೀದ್ ಅಜ್ಮಲ್ 48ಕ್ಕೆ 3, ಉಮರ್ ಗುಲ್ 78ಕ್ಕೆ 3, ಅಬ್ದುಲ್ ರಹ್ಮಾನ್ 40ಕ್ಕೆ 2, ಜುನೈದ್ ಖಾನ್ 57ಕ್ಕೆ 2). ಪಾಕಿಸ್ತಾನ: ಮೊದಲ ಇನಿಂಗ್ಸ್ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 42 (ಮೊಹಮ್ಮದ್ ಹಫೀಜ್ ಬ್ಯಾಟಿಂಗ್ 18, ತೌಫೀಕ್ ಉಮರ್ ಬ್ಯಾಟಿಂಗ್ 20)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.