ಕ್ರಿಕೆಟ್: ಪಾಕ್‌ನ ಬೃಹತ್ ಮೊತ್ತ

ಶುಕ್ರವಾರ, ಜೂಲೈ 19, 2019
28 °C

ಕ್ರಿಕೆಟ್: ಪಾಕ್‌ನ ಬೃಹತ್ ಮೊತ್ತ

Published:
Updated:

ಕೊಲಂಬೊ: ಪಾಕಿಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದ್ದಾರೆ. ಆದರೆ ಮೂರನೇ ದಿನವೂ ಮಳೆಯ ಕಾಟ ಮುಂದುವರಿಯಿತು.ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನದ 551 ರನ್‌ಗಳಿಗೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡದವರು 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದ್ದಾರೆ.ಆತಿಥೇಯ ಲಂಕಾ ಆರಂಭಿಕ  ಬ್ಯಾಟ್ಸ್‌ಮನ್ ತರಂಗ ಪರಣವಿತನಾ ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ತಿಲಕರತ್ನೆ ದಿಲ್ಶಾನ್ (ಬ್ಯಾಟಿಂಗ್ 46) ಹಾಗೂ ಕುಮಾರ ಸಂಗಕ್ಕಾರ (ಬ್ಯಾಟಿಂಗ್ 22) ತಂಡಕ್ಕೆ ಆಸರೆಯಾಗಿದ್ದಾರೆ.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್: 147 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 551 ಡಿಕ್ಲೇರ್ಡ್ (ಮಿಸ್ಬಾ ಉಲ್ ಹಕ್ ಔಟಾಗದೆ 66; ರಂಗನಾ ಹೇರತ್ 164ಕ್ಕೆ3); ಶ್ರೀಲಂಕಾ ಮೊದಲ ಇನಿಂಗ್ಸ್: 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 70 (ತಿಲಕರತ್ನೆ ದಿಲ್ಶಾನ್ ಬ್ಯಾಟಿಂಗ್ 46, ಕುಮಾರ ಸಂಗಕ್ಕಾರ ಬ್ಯಾಟಿಂಗ್ 22; ಜುನೈದ್ ಖಾನ್ 22ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry