ಕ್ರಿಕೆಟ್: ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವ ಗುರಿ

7

ಕ್ರಿಕೆಟ್: ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವ ಗುರಿ

Published:
Updated:
ಕ್ರಿಕೆಟ್: ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವ ಗುರಿ

ಸಿಡ್ನಿ:ಭಾರತ ವಿರುದ್ಧದ ಸೋಲಿನ ನಂತರ ಘಾಸಿಗೊಂಡಿರುವ ಆಸ್ಟ್ರೇಲಿಯಾ ಮತ್ತೆ ಯಶಸ್ಸಿನ ಹಾದಿ ಹಿಡಿದು, ಪಾಯಿಂಟುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಉದ್ದೇಶ ಹೊಂದಿದೆ.ಶುಕ್ರವಾರ ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ಎದುರು ಆಘಾತವಾಗದಂತೆ ಆಡುವುದು ಕಾಂಗರೂಗಳ ಪಡೆಯ ಗುರಿ. ಪೂರ್ಣ ಪಾಯಿಂಟ್ ಗಳಿಸುವುದು ಮೊದಲ ಆದ್ಯತೆ. ಬೋನಸ್ ಪಾಯಿಂಟ್ ಗಿಟ್ಟಿಸುವುದು ಸಾಧ್ಯವಾದರೆ ಅದು ಅದೃಷ್ಟ. ಗಾಯಗೊಂಡಿರುವ ಮೈಕಲ್  ಕ್ಲಾರ್ಕ್ ಬದಲಿಗೆ ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಹೋರಾಡಲಿರುವ ಆಸ್ಟ್ರೇಲಿಯಾಕ್ಕೆ ಇದೊಂದು ಆಸಕ್ತಿಕರ ಪಂದ್ಯ. ಕಳೆದ ವರ್ಷವೇ ನಾಯಕತ್ವ ತೊರೆದಿದ್ದ `ಪಂಟರ್~ ಮತ್ತೆ ನಾಯಕನಾಗಿ ಆಡುವುದನ್ನು ನೋಡಲು ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಉತ್ಸಾಹದಿಂದ ಕಾಯ್ದಿದ್ದಾರೆ. ಕ್ಲಾರ್ಕ್ ಲಭ್ಯವಿಲ್ಲದಾಗ ಉಪ ನಾಯಕ ಡೇವಿಡ್ ವಾರ್ನರ್‌ಗೆ ತಂಡವನ್ನು ಮುನ್ನಡೆಸುವ ಅವಕಾಶ ನೀಡಬಹುದಿತ್ತು.ಆದರೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಯ್ಕೆ ಸಮಿತಿಗೆ ವಾರ್ನರ್ ಮೇಲೆ ಅಷ್ಟೊಂದು ವಿಶ್ವಾಸವಿಲ್ಲ. ಅದೇ ಕಾರಣಕ್ಕಾಗಿ ಪಾಂಟಿಂಗ್‌ಗೆ ನೇತೃತ್ವದ ಹೊಣೆ ಹೊರಿಸಿದೆ. ನಾಯಕತ್ವವು ಹೊಸ ಅನುಭವ ಆಗಿಲ್ಲವಾದ್ದರಿಂದ ರಿಕಿ ತಮ್ಮ ತಂಡವನ್ನು ಯಶಸ್ಸಿಯಾಗಿ ಮುನ್ನಡೆಸುತ್ತಾರೆಂದು ನಿರೀಕ್ಷೆ ಮಾಡಬಹುದು.ಆಸ್ಟ್ರೇಲಿಯಾದ ಮೇಲ್ಪಂಕ್ತಿಯ ಬ್ಯಾಟ್ಸ್‌ಮನ್‌ಗಳು ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಇಂಥ ಸ್ಥಿತಿಯಲ್ಲಿ ವೇಗದ ದಾಳಿಯಿಂದ ಪಾಂಟಿಂಗ್ ಪಡೆಯ ಬುಡಕ್ಕೆ ಪೆಟ್ಟು ನೀಡುವುದು ಜಯವರ್ಧನೆ ಲೆಕ್ಕಾಚಾರ. ದೊಡ್ಡ ಇನಿಂಗ್ಸ್ ಕಟ್ಟುವ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿಬಿಟ್ಟರೆ ಒತ್ತಡವೂ ಕಡಿಮೆ ಆಗುತ್ತದೆಂದು ಕೂಡ ಯೋಚಿಸಿದ್ದಾರೆ. ಈ ಯೋಚನೆಯು ಅಂಗಳದಲ್ಲಿ ಕಾರ್ಯರೂಪಕ್ಕೆ ಬರುತ್ತದೆಯೇ ಎಂದು ಕಾಯ್ದು ನೋಡಬೇಕು!ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 8.50ಕ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry