ಕ್ರಿಕೆಟ್: ಪೂರ್ವ ವಲಯಕ್ಕೆ ದುಲೀಪ್ ಟ್ರೋಫಿ

7

ಕ್ರಿಕೆಟ್: ಪೂರ್ವ ವಲಯಕ್ಕೆ ದುಲೀಪ್ ಟ್ರೋಫಿ

Published:
Updated:
ಕ್ರಿಕೆಟ್: ಪೂರ್ವ ವಲಯಕ್ಕೆ ದುಲೀಪ್ ಟ್ರೋಫಿ

ಇಂದೋರ್ (ಪಿಟಿಐ): ಪೂರ್ವ ವಲಯ ತಂಡದವರು ಇತಿಹಾಸ ಬರೆದಿದ್ದಾರೆ. ಕಾರಣ ಇದೇ ಮೊದಲ ಬಾರಿ ಈ ತಂಡದವರು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಹೋಳ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಕೊನೆಗೊಂಡ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ಇನಿಂಗ್ಸ್ ಹಾಗೂ 20 ರನ್‌ಗಳಿಂದ ಕೇಂದ್ರ ವಲಯ ತಂಡವನ್ನು ಸೋಲಿಸಿತು. ಐದು ದಿನಗಳ ಪಂದ್ಯ ಮೂರೇ ದಿನಗಳಲ್ಲಿ ಮುಗಿದು ಹೋಯಿತು.ಸಂಕ್ಷಿಪ್ತ ಸ್ಕೋರ್: ಕೇಂದ್ರ ವಲಯ: ಮೊದಲ ಇನಿಂಗ್ಸ್ 49.3 ಓವರ್‌ಗಳಲ್ಲಿ 133 (ನಮನ್ ಓಜಾ 44; ಅಶೋಕ್ ದಿಂಡಾ 29ಕ್ಕೆ4) ಹಾಗೂ 61 ಓವರ್‌ಗಳಲ್ಲಿ 217 (ಜಲಜ್ ಎಸ್.ಸಕ್ಸೇನಾ 46; ಶಮಿ ಅಹ್ಮದ್ 50ಕ್ಕೆ4); ಪೂರ್ವ ವಲಯ: ಮೊದಲ ಇನಿಂಗ್ಸ್ 110.1 ಓವರ್‌ಗಳಲ್ಲಿ 370 (ಅನುಸ್ತೂಪ್ ಮಜುಮ್ದಾರ್ 52, ವೃದ್ಧಿಮಾನ್ ಸಹಾ 170; ಭುವನೇಶ್ವರ್ ಕುಮಾರ್ 80ಕ್ಕೆ3). ಫಲಿತಾಂಶ: ಪೂರ್ವ ವಲಯ ತಂಡಕ್ಕೆ ಇನಿಂಗ್ಸ್ ಹಾಗೂ 20 ರನ್‌ಗಳ ಜಯ ಮತ್ತು ಚಾಂಪಿಯನ್ ಪಟ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry