ಮಂಗಳವಾರ, ನವೆಂಬರ್ 19, 2019
27 °C

ಕ್ರಿಕೆಟ್: ಫೈನಲ್‌ಗೆ ಬಂಬಲ್‌ಬೀಸ್, ಡೇರ್ ಡೇವಿಲ್ಸ್

Published:
Updated:

ಗದಗ:ನಗರದ ಐ.ಜೆ.ಅಬ್ಬಿಗೇರಿ ಕ್ರೀಡಾ ಮೈದಾನದಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಂಬಲ್‌ಬೀಸ್ ಹಾಗೂ ಡೇರ್ ಡೇವಿಲ್ಸ್ ತಂಡಗಳು ಫೈನಲ್ ಪ್ರವೇಶಿಸಿದವು.ಮೊದಲ ಪಂದ್ಯ: ವಾರ್ಡ್ ನಂ 29  ರಾಯಲ್‌ಕಿಂಗ್ಸ್ ಹಾಗೂ ವಾರ್ಡ್ ನಂ 30 ಬಂಬಲ್‌ಬೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಬಂಬಲ್‌ಬೀಸ್ ತಂಡ 35 ರನ್‌ಗಳ ಅಂತರದಿಂದ ಜಯ ಗಳಿಸಿ ಫೈನಲ್ ಪ್ರವೇಶಿಸಿತು.ಬಂಬಲ್‌ಬೀಸ್ ತಂಡ ಅಲ್ತಾಫ್ (78) ಹಾಗೂ ರಶೀದ್  (20)  ಸಹೋದರರ ಐದನೆ ವಿಕೆಟ್ ಜೊತೆಯಾಟದಿಂದ  16 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ರಾಯಲ್‌ಕಿಂಗ್ಸ್ ತಂಡ 16 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿ ಸೋಲು ಅನುಭವಿಸಿತು.ಅಲ್ತಾಫ್ 10*4, 2*6 ಒಳಗೊಂಡತೆ 78 ರನ್‌ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.ಎರಡನೇ ಪಂದ್ಯ: ವಾರ್ಡ್ ನಂ 27 ಡೇರ್ ಡೇವಿಲ್ಸ್ ಹಾಗೂ ವಾರ್ಡ್ ನಂ 37 ಸ್ಪಾರ್ಕಿಂಗ್ ಸ್ಟಾರ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಡೇರ್ ಡೇವಿಲ್ಸ್ ತಂಡ 50 ರನ್‌ಗಳ ಅಂತರದಿಂದ ಜಯ ಗಳಿಸಿ ಎರಡನೆ ತಂಡವಾಗಿ ಫೈನಲ್ ಪ್ರವೇಶಿಸಿತು.ಮೊದಲು ಬ್ಯಾಟ್ ಮಾಡಿದ ಡೇರ್ ಡೇವಿಲ್ಸ್ ತಂಡ ಸಿದ್ದು 43(37) ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ ನಿಗದಿತ 16 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ನಂತರ ಬ್ಯಾಟಿಂಗ್ ಇಳಿದ ಸ್ಪಾರ್ಕಿಂಗ್‌ಸ್ಟಾರ್ಸ್‌ ತಂಡ ಅಂಬರೀಷ 3-0-17-3 ಹಾಗೂ ಅಪ್ಪು 2-0-10-3 ಅವರ ಮಾರಕ ದಾಳಿಗೆ ಕುಸಿತ ಕಂಡು 14.1 ಓವರ್‌ಗಳಲ್ಲಿ ಎಲ್ಲ ವಿಕೆಟ್  ಕಳೆದುಕೊಂಡು 84 ರನ್ ಗಳಿಸಿ ಸೋಲು ಕಂಡಿತು.ಬೃಹತ್ ಮೊತ್ತ ಸೇರಿಸುವಲ್ಲಿ ನೆರವಾದ ಸಿದ್ದು 43(37) ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.ಇಂದಿನ ಪಂದ್ಯ: ಗ್ರಾಮಾಂತರ: ನಾಗಾವಿ ಜೇಂಟ್ಸ್ ವಿರುದ್ಧ ಹರ್ತಿ ಹಂಟರ್ಸ್‌ ತಂಡ ಸಮಯ : ಬೆಳಿಗ್ಗೆ 9.30.ವಾರ್ಡ್(ಶಹರ) : ವಾರ್ಡ್ ನಂ 30 ಬಂಬಲ್‌ಬೀಸ್ ವಿರುದ್ಧ ವಾರ್ಡ್ ನಂ 27 ಡೇರ್ ಡೇವಿಲ್ಸ್‌ತಂಡ, ಮಧ್ಯಾಹ್ನ : 2.30

ಪ್ರತಿಕ್ರಿಯಿಸಿ (+)