ಕ್ರಿಕೆಟ್: ಫೈನಲ್‌ಗೆ ರೇವಾ ಐಟಿಎಂ, ಆರ್‌ವಿಸಿಇ

ಸೋಮವಾರ, ಮೇ 20, 2019
30 °C

ಕ್ರಿಕೆಟ್: ಫೈನಲ್‌ಗೆ ರೇವಾ ಐಟಿಎಂ, ಆರ್‌ವಿಸಿಇ

Published:
Updated:

ಬೆಂಗಳೂರು: ರೇವಾ ಐಟಿಎಂ ಮತ್ತು ಆರ್‌ವಿಸಿಇ ತಂಡಗಳು ಇಲ್ಲಿ ನಡೆಯುತ್ತಿರುವ ಎಂಎಸ್‌ಆರ್‌ಐಟಿ ಆಶ್ರಯದ 14ನೇ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಇಂದು  ಪೈಪೋಟಿ ನಡೆಸಲಿವೆ.ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಈ ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು. ಫೈನಲ್ ಪಂದ್ಯ ಐಐಎಸ್‌ಸಿ ಜಿಮ್ಖಾನಾ ಮೈದಾನದಲ್ಲಿ ನಡೆಯಲಿದೆ. ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಎಂಎಸ್‌ಆರ್‌ಐಟಿ 41 ರನ್‌ಗಳಿಂದ ಎಸ್‌ಬಿಎಂಜೆಸಿಇ ವಿರುದ್ಧ ಜಯ ಪಡೆಯಿತು. ಆದರೂ ಆತಿಥೇಯ ತಂಡ ಫೈನಲ್ ಪ್ರವೇಶಿಲು ವಿಫಲವಾಯಿತು.ಸಂಕ್ಷಿಪ್ತ ಸ್ಕೋರ್: ಎಂಎಸ್‌ಆರ್‌ಐಟಿ: 25 ಓವರ್‌ಗಳಲ್ಲಿ 4 ವಿಕೆಟ್‌ಗೆ 134 (ಪ್ರತೀಕ್ಷ್ 34, ಅಂಕಿತ್ ವೋರಾ 27, ಆಶ್ರಿತ್ 17ಕ್ಕೆ 2, ಪಾರ್ಥ 25ಕ್ಕೆ 2). ಎಸ್‌ಬಿಎಂಜೆಸಿಇ: 24 ಓವರ್‌ಗಳಲ್ಲಿ 98 (ಪ್ರಶಾಂತ್ 22, ರೋಹಿತ್ 18, ಅಂಕಿತ್ ವೋರಾ 18ಕ್ಕೆ 3, ಎಸ್. ಸಂದೇಶ್ 3ಕ್ಕೆ 2). ಫಲಿತಾಂಶ: ಎಂಎಸ್‌ಆರ್‌ಐಟಿಗೆ 41 ರನ್ ಜಯ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry