ಮಂಗಳವಾರ, ನವೆಂಬರ್ 12, 2019
25 °C
ಪಿಕ್ಚರ್ ಪ್ಯಾಲೆಸ್

ಕ್ರಿಕೆಟ್ ಬಣ್ಣಗಳು...

Published:
Updated:
ಕ್ರಿಕೆಟ್ ಬಣ್ಣಗಳು...

ನುಣ್ಣನೆ ಕೆನ್ನೆಯನ್ನು ಬಣ್ಣ ಮೆತ್ತುವ ಹುಡುಗನ ಬ್ರಶ್ಶಿಗೊಡ್ಡಿಕೊಂಡ ಆಧುನಿಕ ಯುವತಿ ಅದರಿಂದ ಚರ್ಮಕ್ಕೆ ಅಲರ್ಜಿ ಆಗುವುದಿಲ್ಲವಷ್ಟೆ ಎಂಬುದನ್ನು ಖಾತರಿಪಡಿಸಿಕೊಂಡಳು. ತನ್ನ ಅಂಗಿಯ ಬಣ್ಣವನ್ನೇ ಹೋಲುವ ಕೆಂಬಣ್ಣದಲ್ಲಿ `ಆರ್‌ಸಿಬಿ' ಎಂದು ಬರೆಸಿಕೊಂಡು ಒಳಕ್ಕೆ ಹೋದಳು.

ಅಲ್ಲಿ ತನ್ನಂತೆಯೇ ಬರಹ ಮೂಡಿಸಿಕೊಂಡ ಇನ್ನಷ್ಟು ಕೆನ್ನೆಗಳು. ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್‌ನ (ಐಪಿಎಲ್) ಹುಚ್ಚು ಹತ್ತಿಸಿಕೊಂಡವರಲ್ಲಿ ಈಗ ಲಲನೆಯರ ಸಂಖ್ಯೆ ದೊಡ್ಡದಿದೆ. ಅವರ ನಡುವೆ ಇನ್ಫೋಸಿಸ್ ವನಿತೆ ಸುಧಾಮೂರ್ತಿ.

ಇನ್ನೊಂದು ಕಡೆ ಮಗನ ಸಮಕ್ಕೂ ಕುಣಿಯುತ್ತಿದ್ದ ಮಾಡೆಲ್ ಅನಿತಾ ಖೋಲೆ. ಮೊನ್ನೆ ತಾನೆ `ಬಿಗ್ ಬಾಸ್' ಮನೆಯಿಂದ ಹೊರಬಂದ ನಟಿ ಸಂಜನಾ ಅದಾಗಲೇ ರಾಯಲ್ ಚಾಲೆಂಜರ್ಸ್‌ ಕೆಂಪು ಬಾವುಟ ಹಾರಿಸುತ್ತಿದ್ದರು. ನೀಳಕಾಯದ ನಟಿ ರಾಗಿಣಿ ಮತ್ತೊಂದೆಡೆ.

ಕೋಡಿಹಳ್ಳಿಯ ಕುಮಾರ್ ಈಶ್ವರನ ವೇಷ ಧರಿಸಿ ಬಂದಿದ್ದರು. ಯುಗಾದಿ ದಿನ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ಗೆಲುವು ಸಾಧಿಸಿದ ಸಂಭ್ರಮಕ್ಕೆ ಸಾಕ್ಷಿಯಾದವರ `ಚಿತ್ರಿಕೆ'ಗಳು ಇದೋ...

ಪ್ರತಿಕ್ರಿಯಿಸಿ (+)