ಕ್ರಿಕೆಟ್: ಬೃಹತ್ ಮೊತ್ತದತ್ತ ಪಾಕ್

7

ಕ್ರಿಕೆಟ್: ಬೃಹತ್ ಮೊತ್ತದತ್ತ ಪಾಕ್

Published:
Updated:

ಅಬುಧಾಬಿ: ತೌಫೀಕ್ ಉಮರ್ (ಅಜೇಯ 109) ಗಳಿಸಿದ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.

ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಬುಧವಾರದ ಆಟದ ಅಂತ್ಯಕ್ಕೆ ಪಾಕಿಸ್ತಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ 259 ರನ್ ಗಳಿಸಿತ್ತು. ಇದೀಗ ಮಿಸ್ಬಾ ಉಲ್ ಹಕ್ ಬಳಗ 62 ರನ್‌ಗಳ ಮುನ್ನಡೆ ಪಡೆದಿದೆ.

ಮೊಹಮ್ಮದ್ ಹಫೀಜ್ (75) ಮತ್ತು ಉಮರ್ ಮೊದಲ ವಿಕೆಟ್‌ಗೆ 118 ರನ್‌ಗಳನ್ನು ಸೇರಿಸಿದರು. ಅಜೇಯ 60 ರನ್ ಗಳಿಸಿದ ಅಜರ್ ಅಲಿ ಕೂಡಾ ಪಾಕ್ ನೆರವಿಗೆ ನಿಂತರು.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 197. ಪಾಕಿಸ್ತಾನ: ಮೊದಲ ಇನಿಂಗ್ಸ್ 98 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 259 (ಮೊಹಮ್ಮದ್ ಹಫೀಜ್ 75, ತೌಫೀಕ್ ಉಮರ್ ಬ್ಯಾಟಿಂಗ್ 109, ಅಜರ್ ಅಲಿ ಬ್ಯಾಟಿಂಗ್ 60).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry