ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಸೆರೆ

7

ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಸೆರೆ

Published:
Updated:

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಜಯನಗರದಲ್ಲಿ ಶನಿವಾರ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ತ್ಯಾಗರಾಜನಗರದ ದಿನೇಶ್‌ಕುಮಾರ್ ಉರುಫ್ ದಿನೇಶ್ (36) ಮತ್ತು ಜಯನಗರದ ವಡಿವೇಲು (34) ಬಂಧಿತರು. ಆರೋಪಿಗಳಿಂದ ಎರಡು ಲಕ್ಷ ನಗದು, ಎಂಟು ಮೊಬೈಲ್ ಫೋನ್ ಮತ್ತು ಟಿ.ವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ ದಿನೇಶ್‌ಕುಮಾರ್ 10 ವರ್ಷಗಳಿಂದ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ. ಮುಂಬೈ ಮತ್ತು ದೆಹಲಿ ಮೂಲದ ಬುಕ್ಕಿಗಳೊಂದಿಗೂ ಆತ ಸಂಪರ್ಕ ಹೊಂದಿದ್ದ ಎಂದು ವಿಚಾರಣೆಯಿಂದ ಗೊತ್ತಾಗಿದೆ. ಆತನ ಜತೆ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಬೆನಕ, ಸೋನಿ, ಮುಖೇಶ್, ಹರೀಶ್, ಬಚನ್, ಲೋಕೇಶ, ಸೀಬು, ಟೈಗರ್, ಅಕ್ಕಿಪೇಟೆ ಬಾಬು ಎಂಬುವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಕುಖ್ಯಾತ ಬುಕ್ಕಿ ಫೈಟರ್ ರವಿ ಮತ್ತು ಆತನ ಸಹಚರರನ್ನು ಶುಕ್ರವಾರ ಬಂಧಿಸಿದ್ದ ಸಿಸಿಬಿ ಪೊಲೀಸರುನಗದು ಸೇರಿದಂತೆ ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry