ಸೋಮವಾರ, ಜೂನ್ 14, 2021
22 °C

ಕ್ರಿಕೆಟ್: ಬೆಳಗಾವಿಗೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಇಲ್ಲಿನ ಎನ್‌ವಿ ಮೈದಾನದಲ್ಲಿ ನೂತನ ವಿದ್ಯಾಲಯ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಗುರುವಾರ ನಡೆದ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ  ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡ ರಾಯಚೂರು ಕಂಬೈನ್ಡ್11 ತಂಡದ ವಿರುದ್ಧ 284 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 348 ರನ್‌ಗಳ ಬೃಹತ್ ಮೊತ್ತದ ಸವಾಲ ನೀಡಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಕ್ರಿಸ್‌ಗಿಳಿದ ರೋಹಿತ್ ಹಾಗೂ ಗಣೇಶ. ಕೆ, ಕ್ರಮವಾಗಿ 18 ಎಸೆತಗಳಲ್ಲಿ 8 ಹಾಗೂ 118ಕ್ಕೆ 101 ರನ್‌ಗಳನ್ನು ಪೇರಿಸಿದರು.  ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟುವಂತೆ ಮಾಡಿದ ಗಣೇಶ ಬ್ಯಾಟಿಂಗ್ ವೈಖರಿ ತಂಡದ ಆಟಗಾರರಲ್ಲಿ ಗೆಲುವಿನ ರೆಕ್ಕೆ ಪುಕ್ಕ ಹುಟ್ಟುವಂತೆ ಮಾಡಿದವು. ಅಮೋಘ ಬ್ಯಾಟಿಂಗ್ ಮೂಲಕ ಶತಕ ಪೂರೈಸಿದ ಗಣೇಶ ಕ್ರಿಸ್‌ನಲ್ಲಿ ಬ್ಯಾಟ್ ಎತ್ತಿ ಪ್ರೇಕ್ಷಕರ ಗ್ಯಾಲರಿಯತ್ತ ಸಂಭ್ರಮದ ಚಿಲುಮೆ ಬೀರಿದರು.  14 ಬೌಂಡರಿ  ಬಾರಿಸುವ ಮೂಲಕ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಬೌಂಡರಿ ಎತ್ತಲು ಹೋಗಿ ವಿಕೆಟ್ ಕಳೆದುಕೊಂಡು ನಿರಾಶೆ ಬಾರ ಹೊತ್ತು ಪೆವಿಲಿಯನ್‌ಗೆ ಮರಳಿದರು. ರೋಹಿತ್ ದೇಸಾಯಿ ವಿಕೆಟ್ ಫತನವಾಯಿತು.

 

ನಂತರ ಬಂದ ಶಿಶಿರ ಭವಾನಿ 42 ಎಸೆತಗಳಲ್ಲಿ 39 ರನ್‌ಗಳಿಸ ವಿಕೆಟ್ ಒಪ್ಪಿಸಿದರು.  ನಂತರ ಬ್ಯಾಟಿಂಗ್‌ಗೆ ಬಂದ ರಾಹುಲ್ ನಾಯಕ್ 33 ಎಸೆತಗಳಲ್ಲಿ 69 ರನ್‌ಗಳನ್ನು ಗಳಿಸಿದರು. ಶಂತಾನು 28 ಎಸೆತಗಳಿಗೆ 9 ಬೌಂಡರಿ ಬಾರಿಸಿ 54ರನ್‌ಗಳನ್ನು ಪೇರಿಸಿದರು.ತೇಜಸ್ ಪವಾರ ಹಾಗೂ ಪರಪ್ಪ ಮರಡಿ ವಿಕೆಟ್ ಬಹುಬೇಗನೆ ಪತನವಾದವು.ಬೌಲರ್‌ಗಳು ಕ್ರಿಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾದರು. ಬೌಲರ್‌ಗಳ ವೈಫಲ್ಯವನ್ನು ಗೆಲುವಿಗೆ ವರದಾನವಾಗಿ ಬಳಸಿಕೊಂಡ ಬೆಳಗಾವಿ ತಂಡದ ಬ್ಯಾಟ್ಸ್‌ಮನ್‌ಗಳು ಜಾಣ್ಮೆಯ ಬ್ಯಾಟಿಂಗ್ ಪ್ರದರ್ಶನ ಉತ್ತಮ ರನ್ ಕಲೆ ಹಾಕಲು ಸಾಧ್ಯವಾಯಿತು.ಎಸ್.ಜಿ. ಪಾಟೀಲ್ ಹಾಗೂ ಚಂದ್ರಕಾಂತ ತಲಾ 2 ವಿಕೆಟ್ ಪಡೆದುಕೊಂಡರು.ನಂತರ ಬ್ಯಾಟಿಂಗ್ ಮಾಡಿದ ರಾಯಚೂರು ತಂಡ 20.2 ಓವರ್‌ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 64 ರನ್‌ಗಳನ್ನು ಪೇರಿಸುವ ಮೂಲಕ ಹೀನಾಯ ಸೋಲು ಅನುಭವಿಸಿತು.ಎದುರಾಳಿ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಬೃಹತ್ ಮೊತ್ತದ ರನ್ ಬೆನ್ನು ಹತ್ತುವಲ್ಲಿ ವಿಫಲವಾದರು. ಆರಂಭಿಕ ಬ್ಯಾಟ್ಸ್‌ಮನ್ ಸೈಯದ್ ಸುಲೇಮಾನ್ 43 ಎಸೆತಗಳಿಗೆ 26 ರನ್‌ಗಳಿಸಿ ಪರಪ್ಪ ಮರಡಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಎಲ್ಲ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲವಾದರು. ಸಂತೋಷ 14 ಎಸೆತಗಳಿಗೆ 6 ರನ್ ಗಳಿಸಿದರು. ಇನ್ನೂ 29.4 ಓವರ್‌ಗಳು ಇರುವಾಗಲೇ ಎಲ್ಲ ವಿಕೆಟ್ ಫತನ, ತಂಡದ ಆಟಗಾರರಲ್ಲಿ ಸೋಲಿನ ಛಾಯೆ ಮೂಡಿಸಿತು.ಪರಪ್ಪ ಮರಡಿ -6, ಸಚಿನ್ ಶಿಂಧೆ-2 ವಿಕೆಟ್ ಪಡೆದರು. ಬೆಳಗಾವಿ ತಂಡದ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಲಯ ಕಂಡುಕೊಳ್ಳುವ ಮೂಲಕ ಎದುರಾಳಿ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು.ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಗಣೇಶ. ಕೆ, ಪಂದ್ಯಪುರುಷ ಪ್ರಶಸ್ತಿ ಪಡೆದುಕೊಂಡರು.

ಇಂದಿನ ಟೂರ್ನಿ: ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡ ಹಾಗೂ ಸಾಹು ಕ್ರಿಕೆಟ್ ಕ್ಲಬ್ ವಿಜಾಪುರ ತಂಡದ ನಡುವೆ ಟೂರ್ನಿ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.