ಶುಕ್ರವಾರ, ಮೇ 20, 2022
19 °C

ಕ್ರಿಕೆಟ್: ಭಾರತದ ಬೌಲರ್‌ಗಳ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್ಸ್‌ಟೌನ್: ಪ್ರಭಾವಿ ಬೌಲಿಂಗ್ ಪ್ರದರ್ಶನ ನೆರವಿನಿಂದ  ಭಾರತ `ಎ~ ತಂಡದವರು ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ `ಎ~ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ ಆತಿಥೇಯ ವಿಂಡೀಸ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದೆ. ಪ್ರವಾಸಿ ಭಾರತ ತಂಡದ ಬೌಲರ್‌ಗಳಾದ ಅಶೋಕ್ ದಿಂಡಾ (22ಕ್ಕೆ2), ಶಮೀ ಅಹ್ಮದ್ (43ಕ್ಕೆ2) ಪ್ರಭಾವಿ ಪ್ರದರ್ಶನ ತೋರಿದರು. ಸಾಂದರ್ಭಿಕ ಬೌಲರ್ ರೋಹಿತ್ ಶರ್ಮ (31ಕ್ಕೆ2) ಕೂಡ ಗಮನ ಸೆಳೆದರು.ಕ್ರೇಗ್ ಬ್ರೇಥ್‌ವೇಟ್ (ಬ್ಯಾಟಿಂಗ್ 66) ನೆರವು ಇಲ್ಲದಿದ್ದರೆ ವಿಂಡೀಸ್ ತಂಡ ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ಆದರೆ ಉಳಿದ ಆಟಗಾರರನ್ನು ನಿಯಂತ್ರಿಸುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾದರು.ಸಂಕ್ಷಿಪ್ತ ಸ್ಕೋರ್:
ವೆಸ್ಟ್ ಇಂಡೀಸ್ `ಎ~ ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 (ಕ್ರೇಗ್ ಬ್ರೇಥ್‌ವೇಟ್ ಬ್ಯಾಟಿಂಗ್ 66, ಬೂನರ್ 25, ವೀರಸ್ವಾಮಿ ಪೆರುಮಾಳ್ 36; ಅಶೋಕ್ ದಿಂಡಾ 22ಕ್ಕೆ2, ಶಮೀ ಅಹ್ಮದ್ 43ಕ್ಕೆ2, ರೋಹಿತ್ ಶರ್ಮ 31ಕ್ಕೆ2). 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.