ಶನಿವಾರ, ಜೂನ್ 12, 2021
28 °C

ಕ್ರಿಕೆಟ್: ಭಾರತದ ವನಿತೆಯರಿಗೆ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎದುರು 221 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.

ವಾಂಖೇಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 301 ರನ್‌ಗಳ ಗುರಿಗೆ ಉತ್ತರವಾಗಿ ಭಾರತ 27.1 ಓವರ್‌ಗಳಲ್ಲಿ  79 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ಭಾರತ ತಂಡ ಮೊದಲು ಪ್ರವಾಸಿಗರಿಗೆ ಬ್ಯಾಟ್ ಮಾಡಲು ಅವಕಾಶ ನೀಡಿತು. ಆರಂಭಿಕ ಆಟಗಾರ್ತಿಯರನ್ನು ಬೇಗನೇ ಔಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ಮೂರನೇ ವಿಕೆಟ್ ಜೊತೆಯಾಟದಲ್ಲಿ ಮೆಗ್ ಲ್ಯಾನಿಂಗ್ ಹಾಗೂ ಅಲೆಕ್ಸ್ ಬ್ಲಾಕ್‌ವೆಲ್ 180 ರನ್‌ಗಳನ್ನು ಸೇರಿಸಿದರು.

104 ಎಸೆತಗಳನ್ನು ಎದುರಿಸಿದ ಲ್ಯಾನಿಂಗ್ ಒಂದು ಸಿಕ್ಸರ್ ಹಾಗೂ 19 ಬೌಂಡರಿಗಳ ನೆರವಿನಿಂದ 128 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಬ್ಲಾಕ್‌ವೆಲ್ 81 ರನ್ ಕಲೆಹಾಕಿದರು.

ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಸ್ವಲ್ವವೂ ಪ್ರತಿರೋಧ ತೋರಲಿಲ್ಲ. ಆಸ್ಟ್ರೇಲಿಯಾ ತಂಡದ ಎಲಿಸಿ ಪೆರ‌್ರಿ (19ಕ್ಕೆ5) ಹಾಗೂ ರಚೆಲ್ ಹೇನ್ಸ್ (10ಕ್ಕೆ3) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 (ಮೆಗ್ ಲ್ಯಾನಿಂಗ್ 128, ಅಲೆಕ್ಸ್ ಬ್ಲಾಕ್‌ವೆಲ್ 81, ಜೆಸ್ ಕೆಮರೂನ್ 32; ರುಮೇಲಿ ಧಾರ್ 55ಕ್ಕೆ2, ರೀನಾ ಮಲ್ಹೋತ್ರಾ  56ಕ್ಕೆ2); ಭಾರತ: 27.1 ಓವರ್‌ಗಳಲ್ಲಿ 79 (ಸುಲೋಚನಾ ನಾಯ್ಕ 17, ಮಿಥಾಲಿ ರಾಜ್ ಔಟಾಗದೆ 30; ಎಲಿಸಿ ಪೆರ‌್ರಿ 19ಕ್ಕೆ5, ರಚೆಲ್ ಹೇನ್ಸ್ 10ಕ್ಕೆ3). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 221 ರನ್ ಜಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.