ಸೋಮವಾರ, ಡಿಸೆಂಬರ್ 16, 2019
17 °C

ಕ್ರಿಕೆಟ್: ಭಾರತದ ವನಿತೆಯರಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡೋದರ (ಪಿಟಿಐ): ಪೂನಮ್ ರಾವತ್ ಹಾಗೂ ತಿರುಷ್ ಕಾಮಿನಿ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 49 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಆತಿಥೇಯರು ಮೂರು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಸರಣಿ ಗೆಲುವಿನ ಮುನ್ನಡೆ ಸಾಧಿಸಿದರು.ರಿಲಯನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 144 ರನ್‌ಗಳ ಗುರಿ ಎದುರು ಬಾಂಗ್ಲಾ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 94 ರನ್ ಗಳಿಸಿತು.ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 143. (ಪೂನಮ್ ರಾವತ್ 75, ತಿರುಷ್ ಕಾಮಿನಿ 56; ಸಲ್ಮಾ 12ಕ್ಕೆ3). ಬಾಂಗ್ಲಾದೇಶ 20 ಓವರ್‌ಗಳಲ್ಲಿ 94ಕ್ಕೆ7. (ಶಹನಜಾ ಪರ್ವಿನ್ 13, ಸಲ್ಮಾ ಔಟಾಗದೆ 49; ನಾಗರಾಜನ್ ನಿರಂಜನಾ 17ಕ್ಕೆ1, ಸುಬ್ಬಲಕ್ಷ್ಮಿ ಶರ್ಮಾ 15ಕ್ಕೆ1, ಅರ್ಚನಾ ದಾಸ್ 15ಕ್ಕೆ1). ಫಲಿತಾಂಶ: ಭಾರತಕ್ಕೆ 49 ರನ್ ಜಯ.

ಪ್ರತಿಕ್ರಿಯಿಸಿ (+)