ಮಂಗಳವಾರ, ಮೇ 17, 2022
27 °C

ಕ್ರಿಕೆಟ್: ಭಾರತ ಗ್ರೀನ್-ರೆಡ್ ಪಂದ್ಯ ಟೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಭಾರತ ಗ್ರೀನ್-ರೆಡ್ ಪಂದ್ಯ ಟೈ

ನಾಗಪುರ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ...! ಹಾಗಾಯಿತು ಹರಭಜನ್ ಸಿಂಗ್ ನೇತೃತ್ವದ ಭಾರತ ಗ್ರೀನ್ ತಂಡದವರು ಪಾಡು.

ಇಲ್ಲಿ ನಡೆದ ಎನ್‌ಕೆಪಿ ಸಾಳ್ವೆ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗ್ರೀನ್ ತಂಡ 239 ರನ್‌ಗಳ ಗುರಿಯನ್ನು ಭಾರತ ರೆಡ್ ತಂಡಕ್ಕೆ ನೀಡಿತ್ತು. ಆದರೆ ಕೊನೆಯ ಎಸೆತದವರೆಗೂ ಮೆಚ್ಚುವಂತ ಹೋರಾಟ ನಡೆಸಿದ ಪಿಯೂಷ್ ಚಾವ್ಲಾ (92; 85 ಎಸೆತ, 8ಬೌಂ, 2ಸಿಕ್ಸರ್) ಭಜ್ಜಿ ಪಡೆಯ ಗೆಲುವಿಗೆ ಅಡ್ಡಿಯಾದರು. ಈ ಮೂಲಕ ಪಂದ್ಯ `ಟೈ~ಯಲ್ಲಿ ಅಂತ್ಯ ಕಂಡಿತು. ಹಾಗಾಗಿ ಉಭಯ ತಂಡಗಳು ಜಂಟಿ ಚಾಂಪಿಯನ್ ಆದವು.

ಸಂಕ್ಷಿಪ್ತ ಸ್ಕೋರು: ಭಾರತ ಗ್ರೀನ್: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 238. (ಎಸ್. ಅನಿರುಧ್ 39, ಮೊಹಮ್ಮದ್ ಕೈಫ್ 41, ಹರಭಜನ್ ಸಿಂಗ್ ಔಟಾಗದೆ 49, ಇಕ್ಬಾಲ್ ಅಬ್ದುಲ್ಲಾ 18; ಜಯದೇವ್ ಉನದ್ಕತ್ 65ಕ್ಕೆ2, ಪಂಕಜ್ ಸಿಂಗ್ 44ಕ್ಕೆ2, ಪ್ರಕಾಶ್ ಚಂದ್ರ ಸುಧೀಂದ್ರ  38ಕ್ಕೆ2). ಭಾರತ ರೆಡ್ 49.5 ಓವರ್‌ಗಳಲ್ಲಿ 238. (ಅಭಿನವ್ ಮುಕುಂದ್ 37, ಅಂಬಟಿ ರಾಯಡು 25, ಅಶೋಕ್ ಮನೇರಿಯಾ 21, ಪಿಯೂಷ್ ಚಾವ್ಲಾ 92; ಅಭಿಮನ್ಯು ಮಿಥುನ್ (42ಕ್ಕೆ3) , ಇಕ್ಬಾಲ್ ಅಬ್ದುಲ್ಲಾ (38ಕ್ಕೆ3), ಹರಭಜನ್ ಸಿಂಗ್ (37ಕ್ಕೆ3).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.