ಮಂಗಳವಾರ, ಮೇ 11, 2021
22 °C

ಕ್ರಿಕೆಟ್: ಭಾರತ ಜೂನಿಯರ್ ತಂಡಕ್ಕೆ ರಾಜ್ಯದ ಶ್ರೇಯಸ್

ಕೆ.ಓಂಕಾರ ಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಹುಲ್ ದ್ರಾವಿಡ್ ಸರ್ ಬ್ಯಾಟಿಂಗ್ ನನಗೆ ಸ್ಫೂರ್ತಿ. ನಾನು ಅಭ್ಯಾಸ ನಡೆಸುವಾಗ ಅವರು ಕೆಲವೊಂದು ಸಲಹೆ ಕೂಡ ನೀಡಿದ್ದರು. ಅವರಂತೆ ನಾನು ಅತ್ಯುತ್ತಮ ಕ್ರಿಕೆಟಿಗನಾಗಬೇಕು~

-ಈ ಮಾತು ಹೇಳಿದ್ದು ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಏಕೈಕ ಆಟಗಾರ ಶ್ರೇಯಸ್ ಗೋಪಾಲ್.`ಇದೊಂದು ಹೆಮ್ಮೆಯ ಕ್ಷಣ. ಇಂತಹ ಅವಕಾಶಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೆ. ಈಗ ಅವಕಾಶ ಲಭಿಸಿದೆ. ಸ್ಥಿರ ಪ್ರದರ್ಶನ ನೀಡುವುದು ನನ್ನ ಮುಖ್ಯ ಗುರಿ~ ಎಂದು ಆಲ್‌ರೌಂಡರ್ ಶ್ರೇಯಸ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಸೆಪ್ಟೆಂಬರ್ 27ರಿಂದ ಅಕ್ಟೋಬರ್ 9ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿರುವ ಚತುಷ್ಕೋನ ಕ್ರಿಕೆಟ್ ಸರಣಿಯಲ್ಲಿ ಭಾರತವಲ್ಲದೇ, ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಪಾಲ್ಗೊಳ್ಳಲಿವೆ.ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಉದ್ಯಾನ ನಗರಿಯ ಶ್ರೀ ಭಗವಾನ್ ಜೈನ್ ಮಹಾವೀರ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಕೆಎಸ್‌ಸಿಎ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ಮಾಡರ್ನ್ ಕ್ರಿಕೆಟ್ ಕ್ಲಬ್ ತಂಡ ಪ್ರತಿನಿಧಿಸುವ ಅವರು ಈ ಬಾರಿಯ ಏಳು ಪಂದ್ಯಗಳಿಂದ 350 ರನ್ ಹಾಗೂ 24 ವಿಕೆಟ್ ಪಡೆದಿದ್ದಾರೆ.`ನಾನು ದಿನನಿತ್ಯ ಐದು ಗಂಟೆ ಅಭ್ಯಾಸ ನಡೆಸುತ್ತೇನೆ. ಭಾರತ ತಂಡದಲ್ಲಿ ಸ್ಥಾನ ಲಭಿಸಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನನಗೆ ಪೋಷಕರು ಹಾಗೂ ಕಾಲೇಜ್‌ನಿಂದ ಉತ್ತಮ ಬೆಂಬಲ ಸಿಗುತ್ತಿರುವ ಕಾರಣ ನನ್ನ ಈ ಕನಸು ನನಸಾಗಿದೆ~ ಎಂದು ಲೆಗ್ ಸ್ಪಿನ್ನರ್ ಕೂಡ ಆಗಿರುವ ಶ್ರೇಯಸ್ ನುಡಿದಿದ್ದಾರೆ.ಶ್ರೇಯಸ್ ಅವರ ತಂದೆ ಗೋಪಾಲ್ ರಾಮಸ್ವಾಮಿ ಹಾಗೂ ತಾಯಿ ಅಮಿತಾ ಗೋಪಾಲ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. `ಭಾರತ ತಂಡದಲ್ಲಿ ಸ್ಥಾನ ಸಿಗಲು ಆತನ ಕಠಿಣ ಶ್ರಮವೇ ಕಾರಣ~ ಎಂದು ಅವರು ನುಡಿದಿದ್ದಾರೆ. ಅವರು ಓದುವಿನಲ್ಲೂ ಕೂಡ ಮುಂದೆ. ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.ಅವರು 13 ವರ್ಷದೊಳಗಿನವರ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಶಾಲಾ ವಿಭಾಗದ ಟೂರ್ನಿಯಲ್ಲಿ ಫ್ರಾಂಕ್ ಅಂಥೋನಿ ಪಬ್ಲಿಕ್ ಶಾಲೆಯನ್ನು ಪ್ರತಿನಿಧಿಸುತ್ತಿದ್ದ ಶ್ರೇಯಸ್ ಪ್ರೆಸಿಡೆನ್ಸಿ ಶಾಲೆ ಎದುರು ಆಡುವಾಗ `ಡಬಲ್ ಹ್ಯಾಟ್ರಿಕ್~ ಪಡೆದು ಗಮನ ಸೆಳೆದಿದ್ದರು. ಇವರ ಕೋಚ್ ಇರ್ಫಾನ್ ಸೇಟ್ (ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್).19 ವರ್ಷದೊಳಗಿನವರ ವಿನೂ ಮಂಕಡ್ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಅವರು 450 ರನ್ ಹಾಗೂ 12 ವಿಕೆಟ್ ಪಡೆದು ಮಿಂಚಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.