ಕ್ರಿಕೆಟ್: ಭಾರತ-ಪಾಕಿಸ್ತಾನ ಪಂದ್ಯಗಳ ವೇಳೆಯಲ್ಲೂ ಬದಲಾವಣೆ

7

ಕ್ರಿಕೆಟ್: ಭಾರತ-ಪಾಕಿಸ್ತಾನ ಪಂದ್ಯಗಳ ವೇಳೆಯಲ್ಲೂ ಬದಲಾವಣೆ

Published:
Updated:

 


ನವದೆಹಲಿ (ಪಿಟಿಐ): ಮುಂದಿನ ವಾರ ಆರಂಭವಾಗಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಎರಡು ಹಾಗೂ ಮೂರನೇ ಪಂದ್ಯ ಮತ್ತು ಎರಡನೇ ಟ್ವೆಂಟಿ-20 ಪಂದ್ಯದ ವೇಳೆಯಲ್ಲಿ ಬಿಸಿಸಿಐ ಬದಲಾವಣೆ ಮಾಡಿದೆ.

 

ಡಿಸೆಂಬರ್ 30ರಂದು ಚೆನ್ನೈಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯ ನಿಗದಿಯಂತೆ ಬೆಳಿಗ್ಗೆ 9ಕ್ಕೆ ಆರಂಭವಾಗಲಿದೆ. ಆದರೆ, ಕೋಲ್ಕತ್ತ (ಎರಡನೇ ಪಂದ್ಯ, ಜನವರಿ 3) ಹಾಗೂ ಮೂರನೇ ಪಂದ್ಯ (ದೆಹಲಿ, ಜನವರಿ 6) ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿವೆ. ಡಿಸೆಂಬರ್ 28ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಎರಡನೇ ಟಿ-20 ಪಂದ್ಯ ರಾತ್ರಿ 7 ಗಂಟೆಯ ಬದಲು ಸಂಜೆ 5ಕ್ಕೆ ನಡೆಯಲಿದೆ. ಆದರೆ, ಬೆಂಗಳೂರಿನಲ್ಲಿ ನಡೆಯುವ ಪಂದ್ಯದಲ್ಲಿ ಬದಲಾವಣೆಯಾಗಿಲ್ಲ.

 

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ನಾಲ್ಕು ಪಂದ್ಯಗಳ ವೇಳೆಯಲ್ಲೂ ಬದಲಾವಣೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry