ಕ್ರಿಕೆಟ್: ಭುವನೇಶ್ವರ್, ಶಮಿ ಅಹ್ಮದ್‌ಗೆ ಸ್ಥಾನ

7
ಪಾಕ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ

ಕ್ರಿಕೆಟ್: ಭುವನೇಶ್ವರ್, ಶಮಿ ಅಹ್ಮದ್‌ಗೆ ಸ್ಥಾನ

Published:
Updated:

ಬೆಂಗಳೂರು: ಪಾಕಿಸ್ತಾನ ವಿರುದ್ಧದ ಮುಂಬರುವ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಹಾಗೂ ಶಮಿ ಅಹ್ಮದ್ ಸ್ಥಾನ ಪಡೆದಿದ್ದಾರೆ.ದೇಶಿ ಕ್ರಿಕೆಟ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ ಉತ್ತರ ಪ್ರದೇಶದ ಭುವನೇಶ್ವರ್ ಹಾಗೂ ಪಶ್ಚಿಮ ಬಂಗಾಳದ ಶಮಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ದೊರಕಿಸಿಕೊಟ್ಟಿದೆ. ಮೂರು ಪಂದ್ಯಗಳ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಆರು ಬದಲಾವಣೆ ಮಾಡಲಾಗಿದೆ.ಈ ಹಿಂದಿನ ಸರಣಿ ತಪ್ಪಿಸಿಕೊಂಡಿದ್ದ ಸೆಹ್ವಾಗ್ ತಂಡಕ್ಕೆ ಮರಳಿದ್ದಾರೆ. ಏಕದಿನ ಸರಣಿಗೂ ಮುನ್ನ ನಡೆಯಲಿರುವ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಗೂ ತಂಡ ಪ್ರಕಟಿಸಲಾಗಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಇತ್ತೀಚೆಗೆ ನಡೆದ ಸರಣಿಯಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.ಟ್ವೆಂಟಿ-20 ಪಂದ್ಯಗಳು ಕ್ರಮವಾಗಿ ಬೆಂಗಳೂರು (ಡಿ.25) ಹಾಗೂ ಅಹಮದಾಬಾದ್ (ಡಿ.8) ನಡೆಯಲಿವೆ. ಏಕದಿನ ಪಂದ್ಯಗಳು ಚೆನ್ನೈ (ಡಿ.30), ಕೋಲ್ಕತ್ತ (ಜ.3) ಹಾಗೂ ನವದೆಹಲಿಯಲ್ಲಿ (ಜ.6) ಜರುಗಲಿವೆ.ಟ್ವೆಂಟಿ-20 ಸರಣಿಗೆ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ರೋಹಿತ್ ಶರ್ಮ, ಸುರೇಶ್ ರೈನಾ. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಅಶೋಕ್ ದಿಂಡಾ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಪರ್ವಿಂದರ್ ಅವಾನ, ಪಿಯೂಷ್ ಚಾವ್ಲಾ ಹಾಗೂ ಅಂಬಟಿ ರಾಯುಡು.ಏಕದಿನ ತಂಡ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರೋಹಿತ್ ಶರ್ಮ, ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಇಶಾಂತ್ ಶರ್ಮ, ಅಜಿಂಕ್ಯ ರಹಾನೆ. ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಶಮಿ ಅಹ್ಮದ್ ಹಾಗೂ ಅಮಿತ್ ಮಿಶ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry