ಕ್ರಿಕೆಟ್: ಮಂಗಳೂರು ವಿ.ವಿ. ಮುನ್ನಡೆ

7

ಕ್ರಿಕೆಟ್: ಮಂಗಳೂರು ವಿ.ವಿ. ಮುನ್ನಡೆ

Published:
Updated:

ಮಣಿಪಾಲ: ಮಂಗಳೂರು ವಿ.ವಿ., ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸೇಲಂನ ಪೆರಿಯಾರ್ ವಿ.ವಿ. ವಿರುದ್ಧ 74 ರನ್‌ಗಳಿಂದ ಜಯಗಳಿಸಿ ಮೂರನೇ ಸುತ್ತಿಗೆ ಮುನ್ನಡೆಯಿತು. ಆದರೆ ಮಂಗಳವಾರ ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯಗಳು ಹೋರಾಟ ತೋರದೇ ಟೂರ್ನಿಯಿಂದ ನಿರ್ಗಮಿಸಿದವು.ಎಂಐಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಂಗಳೂರು 46ನೇ ಓವರಿನಲ್ಲಿ 171 ರನ್ ಹೊಡೆಯಲಷ್ಟೇ ಶಕ್ತವಾಯಿತು. ಆದರೆ ಎದುರಾಳಿಯನ್ನು 97 ರನ್ನಿಗೆ ಉರುಳಿಸಿತು. ಮಂಗಳೂರು ಕಡೆ ಶಮೀರ್ ಮತ್ತು ಪವನ್ ತಲಾ ಮೂರು ವಿಕೆಟ್ ಪಡೆದರು.ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ತಿರುಚಿರಾಪಳ್ಳಿಯ ಭಾರತಿದಾಸನ್ ವಿಶ್ವ ವಿದ್ಯಾಲಯ 52 ರನ್‌ಗಳಿಂದ ಕ್ರೈಸ್ಟ್ ವಿ.ವಿ. ತಂಡವನ್ನು ಸೋಲಿಸಿದರೆ, ಮಣಿಪಾಲ ವಿ.ವಿ. ಮೈದಾನದಲ್ಲಿ ಆಂಧ್ರ ಪ್ರದೇಶದ ಆಚಾರ್ಯ ನಾಗಾರ್ಜುನ ವಿ.ವಿ. 139 ರನ್‌ಗಳಿಂದ ದಾವಣಗೆರೆ ವಿಶ್ವವಿದ್ಯಾಲಯವನ್ನು ಸದೆಬಡಿಯಿತು.ಸ್ಕೋರುಗಳು: ಮಣಿಪಾಲದ ಎಂಐಟಿ ಮೈದಾನ: ಮಂಗಳೂರು ವಿ.ವಿ.: 45.1 ಓವರುಗಳಲ್ಲಿ 171 (ಶಿವರಾಜ್ 42; ವಿನೋದ್ 24ಕ್ಕೆ3, ವೆಂಕಟರಾಜು 28ಕ್ಕೆ2, ಎಸ್.ನಿವೆಲ್ 20ಕ್ಕೆ2); ಪೆರಿಯಾರ್ ವಿ.ವಿ., ಸೇಲಂ: 32.2 ಓವರುಗಳಲ್ಲಿ 97 (ವೆಂಕಟಪಯತಿ 32; ಎಂ.ಜಿ.ನವೀನ್ 22ಕ್ಕೆ2, ಶಮೀರ್ 24ಕ್ಕೆ3, ಜಿ.ಪವನ್ 16ಕ್ಕೆ3).ಮಣಿಪಾಲ ವಿ.ವಿ. ಮೈದಾನ: ಡಾ.ಬಿ.ಆರ್.ಅಂಬೇಡ್ಕರ್ ವಿ.ವಿ., ಶ್ರೀಕಾಕುಳಂ: 34.5 ಓವರುಗಳಲ್ಲಿ 78 (ಜಿ.ಕಮಲೇಶ್ 22ಕ್ಕೆ5, ಮುದಾಸಿರ್ ಹಸನ್15ಕ್ಕೆ2); ತಿರುವಳ್ಳುವರ್ ವಿ.ವಿ. ವೆಲ್ಲೂರ್: 29.5 ಓವರುಗಳಲ್ಲಿ 69 (ಎಸ್.ಎಚ್.ಶ್ರೀನಿವಾಸ್ 30ಕ್ಕೆ3, ಅಬ್ದುಲ್ ಖುದ್ದೀಶ್ 20ಕ್ಕೆ3, ರಾಜಶೇಖರ್ 13ಕ್ಕೆ2).ಮಣಿಪಾಲ ವಿವಿ ಮೈದಾನ2: ಆಚಾರ್ಯ ನಾಗಾರ್ಜುನ ವಿ.ವಿ. ನಾಗಾರ್ಜುನಸಾಗರ: 49.2 ಓವರುಗಳಲ್ಲಿ 222 (ಪಿ.ಭಾಸ್ಕರನ್ 59, ಡಿ.ಹರ್ಷವರ್ಧನ್ ನಾಯ್ಡು 33; ವಿ.ಶ್ರೀಕಾಂತ್ 51; ಪವನ್ 26ಕ್ಕೆ3, ಕರಣ್ 34ಕ್ಕೆ2, ಮಂಜುನಾಥ್ 53ಕ್ಕೆ4); ದಾವಣಗೆರೆ ವಿ.ವಿ: 28 ಓವರುಗಳಲ್ಲಿ 83 (ನಿರಂಜನ್ 23; ಮಹೇಶ್ 24ಕ್ಕೆ2, ಸುನೀಲ್ 11ಕ್ಕೆ2, ಶ್ರೀಕಾಂತ್ 7ಕ್ಕೆ4).ಎಂಜಿಎಂ ಕಾಲೇಜು ಮೈದಾನ, ಉಡುಪಿ: ಭಾರತಿದಾಸನ್ ವಿ.ವಿ., ತಿರುಚಿರಾಪಳ್ಳಿ: 46 ಓವರುಗಳಲ್ಲಿ 196 (ಬಾಬು 38, ಸರವಣ್ ಎಂ. 63; ನಿಖಿಲ್ 28ಕ್ಕೆ4); ಕ್ರೈಸ್ಟ್ ವಿ.ವಿ: 39.5 ಓವರುಗಳಲ್ಲಿ 144 (ಸಾಜಿದ್ 24, ಎಸ್.ಸರವಣನ್ 19ಕ್ಕೆ2, ಬಾಲಸುಬ್ರಹಮಣಿಯನ್ 25ಕ್ಕೆ2, ಸಲೀಮ್ 19ಕ್ಕೆ2.

ಎನ್‌ಐಟಿಕೆ ಮೈದಾನ, ಸುರತ್ಕಲ್: ಕೇಂದ್ರಿಯ ವಿದ್ಯಾಲಯ, ಕಾಸರಗೋಡು: 22.3 ಓವರುಗಳಲ್ಲಿ 74 (ವಿಶಾಖ್ 35; ಅಭಿನವ್ 11ಕ್ಕೆ4); ಭಾರತಿಯಾರ್, ಕೊಯಮತ್ತೂರು: 22.3 ಓವರುಗಳಲ್ಲಿ 2 ವಿಕೆಟ್‌ಗೆ 79 (ಸಾದಿಖ್ ಔಟಾಗದೇ 55).

ಬ್ಯಾಸ್ಕೆಟ್‌ಬಾಲ್: ಕೇಂದ್ರೀಯ ವಿದ್ಯಾಲಯಕ್ಕೆ ಗೆಲುವು

ಬೆಂಗಳೂರು:  ಹೆಬ್ಬಾಳದ ಕೇಂದ್ರೀಯ ವಿದ್ಯಾಲಯ ತಂಡವು ಬಿಎಫ್‌ಐ ಹಾಗೂ ಐಎಂಜಿ ರಾಜ್ಯ ಲೀಗ್ ಶಾಲಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಬಾಲಕಿಯರ ವಿಭಾಗದ ಮಂಗಳವಾರದ ಪಂದ್ಯದಲ್ಲಿ 42-20 ಅಂಕಗಳಿಂದ ಇಂದಿರಾನಗರದ ತಂಡವನ್ನು ಸೋಲಿಸಿತು.ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಸುಪ್ರಿಯಾ ಮತ್ತು ಸ್ನೇಹಾ ಕ್ರಮವಾಗಿ 12 ಹಾಗೂ 10 ಅಂಕಗಳನ್ನು ಕಲೆ ಹಾಕಿದರು. ಇದೇ ವಿಭಾಗದ ಇತರ ಪಂದ್ಯಗಳಲ್ಲಿ ನ್ಯೂ ಹಾರಿಜನ್ 30-24ರಲ್ಲಿ ಮೇರಿ ಇಮ್ಯಾಕುಲೇಟ್ ಮೇಲೂ, ಬಿಷಪ್ ಕಾಟನ್ 42-20 ರಲ್ಲಿ ದೆಹಲಿ ಪಬ್ಲಿಕ್ ಶಾಲೆಯ ವಿರುದ್ಧವೂ, ಕುಮಾರನ್ಸ್ ತಂಡ 35-12ರಲ್ಲಿ ರಾಜಾಜಿನಗರದ ಎನ್‌ಪಿಎಸ್ ಮೇಲೂ ಜಯ ಸಾಧಿಸಿತು.

ಪುರುಷರ ವಿಭಾಗದ ಪಂದ್ಯಗಳಲ್ಲಿ ದೆಹಲಿ ಪಬ್ಲಿಕ್ ಶಾಲೆ 39-26ರಲ್ಲಿ ಮಲ್ಯ ಅದಿತಿ ಮೇಲೂ, ನ್ಯೂ ಹೊರೈಜನ್ 41-16ರಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ವಿರುದ್ಧವೂ, ಕ್ರೈಸ್ಟ್ ಶಾಲೆ 37-20ರಲ್ಲಿ ಪಿಪಿಇಸಿ ಮೇಲೂ, ವಿಎನ್‌ಎಸ್ 50-2ರಲ್ಲಿ ಕುಮಾರನ್ಸ್ ವಿರುದ್ಧವೂ ಗೆಲುವು ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry