ಕ್ರಿಕೆಟ್: ಮದನ್ ಬಸವರಾಜ್ ಶತಕ

7

ಕ್ರಿಕೆಟ್: ಮದನ್ ಬಸವರಾಜ್ ಶತಕ

Published:
Updated:

ಬೆಂಗಳೂರು: ಮದನ್ ಬಸವರಾಜ್ (105) ಅವರ ಅಜೇಯ ಶತಕದ ನೆರವಿನಿಂದ ಮಾಗಡಿ ಕ್ರಿಕೆಟರ್ಸ್ ತಂಡದವರು ವೈ.ಐ.ಎಸ್.ಎ. ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ 4 ವಿಕೆಟ್‌ಗಳ ಅಂತರದಿಂದ ಸೇಂಟ್ ಜೋಸೆಫ್ಸ್ ಮಾಧ್ಯಮಿಕ ಮತ್ತು ಪ್ರೌಢ ಶಾಲೆ ವಿರುದ್ಧ ವಿಜಯ ಸಾಧಿಸಿ ಚಾಂಪಿಯನ್ ಪಟ್ಟ ಪಡೆದುಕೊಂಡರು.

ಮೊದಲು ಬ್ಯಾಟ್ ಮಾಡಿದ ಸೇಂಟ್ ಜೋಸೆಫ್ಸ್ ತಂಡವು 30 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. ಈ ತಂಡದ ಶಲೋಕಾ (54) ಅರ್ಧ ಶತಕ ಗಳಿಸಿ ಗಮನ ಸೆಳೆದರು.

ಈ ಗುರಿಯನ್ನು ಬೆನ್ನಟ್ಟಿದ    ಮಾಗಡಿ ಕ್ರಿಕೆಟರ್ಸ್ ತಂಡದವರು ಕೇವಲ 23 ಓವರುಗಳಲ್ಲಿ 188 ರನ್ ಕಲೆಹಾಕಿ ಗೆಲುವಿನ ದಡ ಸೇರಿದರು. ಕಳೆದುಕೊಂಡಿದ್ದು ಆರು ವಿಕೆಟ್ ಮಾತ್ರ.

ಸಂಕ್ಷಿಪ್ತ ಸ್ಕೋರ್: ಸೇಂಟ್ ಜೋಸೆಫ್ಸ್ ಮಾಧ್ಯಮಿಕ ಮತ್ತು ಪ್ರೌಢ ಶಾಲೆ: 30 ಓವರುಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 187 (ಶಲೋಕಾ 54; ಅಶೋಕ್ 20ಕ್ಕೆ3, ವಶಿಷ್ಟ 18ಕ್ಕೆ2);

ಮಾಗಡಿ ಕ್ರಿಕೆಟರ್ಸ್: 23 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 188 (ಮದನ್ ಬಸವರಾಜ್ ಔಟಾಗದೆ 105); ಫಲಿತಾಂಶ: ಮಾಗಡಿ ಕ್ರಿಕೆಟರ್ಸ್‌ಗೆ 4 ವಿಕೆಟ್‌ಗಳ ಅಂತರದ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry