ಗುರುವಾರ , ಜೂನ್ 17, 2021
22 °C

ಕ್ರಿಕೆಟ್: ಮಶ್ರಫೆ ಮೊರ್ತಜಾಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಪಿಟಿಐ): ಮಾಜಿ ನಾಯಕ ಮಶ್ರಫೆ ಮೊರ್ತಜಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅವರನ್ನು ಕಡೆಗಣಿಸಲಾಗಿದೆ.ಏಷ್ಯಾ ಕಪ್ ಟೂರ್ನಿ ಢಾಕಾದಲ್ಲಿ ಮಾರ್ಚ್ 11 ರಿಂದ 22ರ ವರೆಗೆ ನಡೆಯಲಿದೆ. 14 ಸದಸ್ಯರ ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಮಂಗಳವಾರ ಪ್ರಕಟಿಸಿತು. ಆದರೆ ನಾಯಕ ಮತ್ತು ಉಪನಾಯಕನ ಹೆಸರನ್ನು ಸೂಚಿಸಿಲ್ಲ.ಮೊರ್ತಜಾ ಇತ್ತೀಚೆಗೆ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಢಾಕಾ ಗ್ಲ್ಯಾಡಿಯೇಟರ್ಸ್ ತಂಡವನ್ನು ಟ್ರೋಫಿಯತ್ತ ಮುನ್ನಡೆಸಿದ್ದರು. ನಜೀಮುದ್ದೀನ್, ಜುಹೂರುಲ್ ಇಸ್ಲಾಮ್, ಶಹಾದತ್ ಹೊಸೇನ್ ಮತ್ತು ಇನಾಮುಲ್ ಹಕ್ ಅವರೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಮಿರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.ತಂಡ ಹೀಗಿದೆ: ಇಮ್ರುಲ್ ಕಯೇಸ್, ನಜೀಮುದ್ದೀನ್, ಜುಹೂರುಲ್ ಇಸ್ಲಾಮ್, ಮುಷ್ಫಿಕುರ್ ರಹೀಮ್, ಶಕೀಬ್ ಅಲ್ ಹಸನ್, ಮಹಮೂದುಲ್ಲಾ, ನಾಸಿರ್ ಹೊಸೇನ್, ಮಶ್ರಫೆ ಬಿನ್ ಮೊರ್ತಜಾ, ಅಬ್ದುರ್ ರಜಾಕ್, ಎಲಿಯಾಸ್ ಸನ್ನಿ, ನಜ್ಮುಲ್ ಹೊಸೇನ್, ಶಫೀವುಲ್ ಇಸ್ಲಾಮ್, ಶಹಾದತ್ ಹೊಸೇನ್, ಇನಾಮುಲ್ ಹಕ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.