ಬುಧವಾರ, ಜೂನ್ 16, 2021
21 °C

ಕ್ರಿಕೆಟ್: ಮಾಹೇಲ ಮಹಾ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲ್ (ಪಿಟಿಐ): ನಾಯಕ ಮಾಹೇಲ ಜಯವರ್ಧನೆ (ಬ್ಯಾಟಿಂಗ್ 168) ಅವರ ಅಮೋಘ ಶತಕದ ನೆರವಿನಿಂದ ಶ್ರೀಲಂಕಾ ತಂಡದವರು ಸೋಮವಾರ ಇಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಆಘಾತದಿಂದ ಪಾರಾಗಿದ್ದಾರೆ.ಗಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಂಕಾ ತಂಡ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ಈ ಮೊತ್ತಕ್ಕೆ ಕಾರಣವಾಗಿದ್ದು ಜಯವರ್ಧನೆ ಅವರ ಸೊಗಸಾದ ಇನಿಂಗ್ಸ್.ಏಕೆಂದರೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಸಿಂಹಳೀಯ ಪಡೆ ಜೇಮ್ಸ ಆ್ಯಂಡರ್ಸನ್ (56ಕ್ಕೆ3) ಅವರ ದಾಳಿಗೆ ಸಿಲುಕಿ ತತ್ತರಿಸಿ ಹೋಗಿತ್ತು. ಆದರೆ ಜಯವರ್ಧನೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 (ಮಾಹೇಲ ಜಯವರ್ಧನೆ ಬ್ಯಾಟಿಂಗ್168, ದಿನೇಶ್ ಚಂಡಿಮಾಲ್ 27, ಪ್ರಸನ್ನ ಜಯವರ್ಧನೆ 23; ಜೇಮ್ಸ ಆ್ಯಂಡರ್ಸನ್ 56ಕ್ಕೆ3, ಸಮಿತ್ ಪಟೇಲ್ 27ಕ್ಕೆ2).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.