ಕ್ರಿಕೆಟ್: ಲಂಕಾಕ್ಕೆ ಇನಿಂಗ್ಸ್ ಮುನ್ನಡೆ

ಮಂಗಳವಾರ, ಜೂಲೈ 16, 2019
25 °C

ಕ್ರಿಕೆಟ್: ಲಂಕಾಕ್ಕೆ ಇನಿಂಗ್ಸ್ ಮುನ್ನಡೆ

Published:
Updated:

ಪಲ್ಲೆಕೆಲೆ (ಪಿಟಿಐ): ತಿಸ್ಸಾರ ಪೆರೇರಾ (86 ಎಸೆತಗಳಲ್ಲಿ 75) ಅವರ ಬಿರುಸಿನಆಟದ ನೆರವಿನಿಂದ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದ್ದಾರೆ.ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಂಗಳವಾರ ಲಂಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 100.2 ಓವರ್‌ಗಳಲ್ಲಿ 337 ರನ್ ಗಳಿಸಿತು. ಈ ಮೂಲಕ 111 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಪಾಕ್ ಮೂರನೇ ದಿನದಾಟದ ಅಂತ್ಯಕ್ಕೆ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ.ಮಳೆಯ ಕಾರಣ ಎರಡನೇ ದಿನದ ಆಟ ನಡೆದಿರಲಿಲ್ಲ. ಆದರೆ ಮೂರನೇ ದಿನ ಲಂಕಾದ ನೆರವಿಗೆ ಬಂದಿದ್ದು ತರಂಗ ಪರಣವಿತನಾ ( 75), ತಿಲಾನ ಸಮರವೀರ (73) ಹಾಗೂ ಪೆರೇರಾ. ಕೇವಲ 44 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆತಿಥೇಯರ ಪಾಲಿಗೆ ಆಪತ್ಬಾಂಧವರಾಗಿದ್ದು ಪರಣವಿತನಾ ಹಾಗೂ ಸಮರವೀರ. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 143 ರನ್ ಸೇರಿಸಿದರು.ಬಳಿಕ ಪೆರೇರಾ ಹಾಗೂ ಕುಲಶೇಖರ ತಂಡದ ಮೊತ್ತ ಹೆಚ್ಚಿಸಿದರು. ಪೆರೇರಾ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 72.5 ಓವರ್‌ಗಳಲ್ಲಿ 226 ಹಾಗೂ 6 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 27 (ನುವಾನ್ ಕುಲಶೇಖರ 9ಕ್ಕೆ1); ಶ್ರೀಲಂಕಾ: ಮೊದಲ ಇನಿಂಗ್ಸ್ 100.2 ಓವರ್‌ಗಳಲ್ಲಿ 337 (ತರಂಗ ಪರಣವಿತನಾ 75, ತಿಲಾನ ಸಮರವೀರ 73, ತಿಸ್ಸಾರ ಪೆರೇರಾ 75, ನುವಾನ್ ಕುಲಶೇಖರ 33; ಜುನೈದ್ ಖಾನ್ 70ಕ್ಕೆ5, ಸಯೀದ್ ಅಜ್ಮಲ್ 66ಕ್ಕೆ3).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry