ಕ್ರಿಕೆಟ್: ಲಂಕಾಕ್ಕೆ ಮಣಿದ ಭಾರತ

7

ಕ್ರಿಕೆಟ್: ಲಂಕಾಕ್ಕೆ ಮಣಿದ ಭಾರತ

Published:
Updated:
ಕ್ರಿಕೆಟ್: ಲಂಕಾಕ್ಕೆ ಮಣಿದ ಭಾರತ

ಬ್ರಿಸ್ಬೇನ್: ವೀರೇಂದ್ರ ಸೆಹ್ವಾಗ್ ಸೊನ್ನೆ ಸುತ್ತಿದರು. ಸಚಿನ್ ತೆಂಡೂಲ್ಕರ್ ಕೂಡ ಇಪ್ಪತ್ತೆರಡಕ್ಕೆ ಔಟ್. ಇನಿಂಗ್ಸ್ ಕಟ್ಟಬೇಕಾದ ಅನುಭವಿಗಳೇ ಕೈಕೊಟ್ಟರು. ಪರಿಣಾಮ ಭಾರತಕ್ಕೆ ಸಿಂಹಳೀಯರ ವಿರುದ್ಧ 51 ರನ್‌ಗಳ ಸೋಲಿನ ಸಂಕಷ್ಟ.`ವೀರೂ~ ಹಾಗೂ `ಲಿಟಲ್ ಚಾಂಪಿಯ್~ ಭದ್ರ ಬುನಾದಿ ಹಾಕಿಕೊಟ್ಟಿದ್ದರೆ ಶ್ರೀಲಂಕಾ ತಂಡವು ಆರು ವಿಕೆಟ್ ಕಳೆದುಕೊಂಡು ಪೇರಿಸಿಟ್ಟ 289 ರನ್ ಮೊತ್ತ ಸವಾಲಿನದ್ದಾಗಿ ಕಾಣಿಸುತ್ತಿರಲಿಲ್ಲ. ಆದರೆ ನಿರೀಕ್ಷೆಯ ಭಾರ ಹೊತ್ತವರೇ ನಿರಾಸೆಗೊಳಿಸಿದರು. ವಿರಾಟ್ ಕೊಹ್ಲಿ (66; 119 ನಿಮಿಷ, 83 ಎಸೆತ, 2 ಬೌಂಡರಿ) ಹಾಗೂ ಇರ್ಫಾನ್ ಪಠಾಣ್ (47; 54 ನಿ.,  34 ಎ., 7 ಬೌಂಡರಿ) ಹೋರಾಟ ನಡೆಸಿದರೂ ಪ್ರಯೋಜನ ಆಗಲಿಲ್ಲ. ಆದರೆ ಭಾರಿ ಒತ್ತಡದ ನಡುವೆಯೂ ಅವರು ಅನುಭವಿಗಳು ನಾಚುವಂತೆ ಬ್ಯಾಟಿಂಗ್ ಪ್ರದರ್ಶಿಸಿದ್ದನ್ನು ಮೆಚ್ಚಲೇಬೇಕು.ಇರ್ಫಾನ್ ಕ್ರೀಸ್‌ಗೆ ಬರುವ ಹೊತ್ತಿಗಾಗಲೇ ಸೋಲಿನ ಕತ್ತಿ ನೆತ್ತಿಯ ಮೇಲೆ ತೂಗಿತ್ತು. ಅಂಥ ಪರಿಸ್ಥಿತಿಯಲ್ಲಿಯೂ ಅವರು ಲಂಕಾ ಬೌಲರ್‌ಗಳ ಉತ್ಸಾಹ ಕುಗ್ಗಿಸುವ ಸಾಹಸ ಮಾಡಿದರು. ಆದರೆ ಇನ್ನೊಂದು ಕೊನೆಯಲ್ಲಿ ತಕ್ಕ ಬೆಂಬಲ ಸಿಗಲಿಲ್ಲ. ಅದಕ್ಕೂ ಮುನ್ನ ಕೊಹ್ಲಿ ಕೂಡ ಇದೇ ರೀತಿಯ ಹಿರಿಯರು ನಿಭಾಯಿಸದಿದ್ದ ಜವಾಬ್ದಾರಿ ಹೊರಬೇಕಾಯಿತು. ನಾಯಕ ಸೆಹ್ವಾಗ್ ಮತ್ತು ಸಚಿನ್ ಮಾತ್ರವಲ್ಲ ಗೌತಮ್ ಗಂಭೀರ್ ಸಹ ಬೇಗ ನಿರ್ಗಮಿಸಿದ್ದೇ ಹೀಗೆ ಆಗಲು ಕಾರಣ.ಭಾರಿ ಕಷ್ಟಪಟ್ಟು ಭಾರತದವರು 45.1 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಗಳಿಸಿದ್ದು 238 ರನ್ ಮಾತ್ರ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಾಹೇಲ ಜಯವರ್ಧನೆ ನೇತೃತ್ವದ ತಂಡಕ್ಕೆ ಇಂಥ ಸಮಸ್ಯೆ ಕಾಡಲಿಲ್ಲ.ಬ್ಯಾಟಿಂಗ್ ಅಂತೂ ಲಯ ತಪ್ಪಲಿಲ್ಲ. ಜಯವರ್ಧನೆ (45; 80 ನಿ., 55 ಎ., 2 ಬೌಂಡರಿ) ಹಾಗೂ ತಿಲಕರತ್ನೆ ದಿಲ್ಶಾನ್ (51; 93 ನಿ., 72 ಎ., 5 ಬೌಂಡರಿ, 1 ಸಿಕ್ಸರ್) ಚೆಂಡು ಹೊಳಪು ಕಳೆದುಕೊಳ್ಳುವವರೆಗೆ ಜೊತೆಯಾಗಿದ್ದು 95 ರನ್ ಕಲೆಹಾಕಿದರು. ಲಾಹಿರು ತಿರುಮನ್ನೆ (62; 83 ನಿ., 62 ಎ., 6 ಬೌಂಡರಿ) ಹಾಗೂ ಔಟಾಗದೆ ಉಳಿದ ಆ್ಯಂಜೆಲೊ ಮಾಥ್ಯೂಸ್ ಅವರು ವಿಕೆಟ್ ಕಾಯ್ದುಕೊಂಡು ಆಡುವ ಪ್ರಯತ್ನ ಮಾಡಿದ್ದು ಸಾರ್ಥಕ. ಗಟ್ಟಿಯಾಗಿ ನಿಂತು ಆಡಿದ್ದರಿಂದ ಲಂಕಾ ಖಾತೆಗೆ ರನ್‌ಗಳೂ ಹರಿದು ಬಂದವು. ಭಾರತಕ್ಕೆ ಕಷ್ಟದ್ದೆನಿಸುವಂಥ ಗುರಿಯನ್ನು ನೀಡಲೂ ಸಾಧ್ಯವಾಯಿತು.ಈ ಪಂದ್ಯದಲ್ಲಿ ಸೋಲುಂಡ ಭಾರತವು ಪಾಯಿಂಟುಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದ್ದರಿಂದ ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕು ಎನ್ನುವಂಥ ಇಕ್ಕಟ್ಟಿನಲ್ಲಿಯೂ ಸಿಲುಕಿಕೊಂಡಿದೆ.ಸ್ಕೋರು ವಿವರ

ಶ್ರೀಲಂಕಾ: 50 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 289

ಮಾಹೇಲ ಜಯವರ್ಧನೆ ಸಿ ವೀರೇಂದ್ರ ಸೆಹ್ವಾಗ್ ಬಿ ಇರ್ಫಾನ್ ಪಠಾಣ್  45

ತಿಲಕರತ್ನೆ ದಿಲ್ಶಾನ್ ಸಿ ಪಾರ್ಥಿವ್ ಪಟೇಲ್ ಬಿ ರವಿಚಂದ್ರನ್ ಅಶ್ವಿನ್  51

ಕುಮಾರ ಸಂಗಕ್ಕಾರ ಸಿ ಸಚಿನ್ ತೆಂಡೂಲ್ಕರ್ ಬಿ ಉಮೇಶ್ ಯಾದವ್  08

ದಿನೇಶ್ ಚಂಡಿಮಾಲ ಬಿ ಇರ್ಫಾನ್ ಪಠಾಣ್  38

ಲಾಹಿರು ತಿರುಮನ್ನೆ ಸಿ ಸುರೇಶ್ ರೈನಾ ಬಿ ಉಮೇಶ್ ಯಾದವ್  62

ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ  49

ತಿಸಾರ ಪೆರೆರಾ ಬಿ ಸುರೇಶ್ ರೈನಾ  10

ಫರ್ವೀಜ್ ಮಹಾರೂಫ್ ಔಟಾಗದೆ  04

ಇತರೆ: (ಬೈ-1, ಲೆಗ್‌ಬೈ-2, ವೈಡ್-18, ನೋಬಾಲ್-1)  22

ವಿಕೆಟ್ ಪತನ: 1-95 (ಮಾಹೇಲ ಜಯವರ್ಧನೆ; 18.4), 2-104 (ತಿಲಕರತ್ನೆ ದಿಲ್ಶಾನ್; 21.5), 3-124 (ಕುಮಾರ ಸಂಗಕ್ಕಾರ; 27.1), 4-195 (ದಿನೇಶ್ ಚಂಡಿಮಾಲ; 38.6), 5-244 (ಲಾಹಿರು ತಿರುಮನ್ನೆ; 45.6), 6-265 (ತಿಸಾರ ಪೆರೆರಾ; 48.1).ಬೌಲಿಂಗ್: ಆರ್.ವಿನಯ್ ಕುಮಾರ್ 8-1-48-0 (ನೋಬಾಲ್-1), ಇರ್ಫಾನ್ ಪಠಾಣ್ 10-0-54-2 (ವೈಡ್-4), ಉಮೇಶ್ ಯಾದವ್ 8-0-58-1 (ವೈಡ್-2), ರವೀಂದ್ರ ಜಡೇಜಾ 10-0-43-0 (ವೈಡ್-1), ರವಿಚಂದ್ರನ್ ಅಶ್ವಿನ್ 10-0-50-2 (ವೈಡ್-4), ವೀರೇಂದ್ರ ಸೆಹ್ವಾಗ್ 2-0-9-0, ಸುರೇಶ್ ರೈನಾ 1-0-10-1 (ವೈಡ್-1), ವಿರಾಟ್ ಕೊಹ್ಲಿ 1-0-14-0 (ವೈಡ್-2).ಭಾರತ: 45.1 ಓವರುಗಳಲ್ಲಿ 238

ವೀರೇಂದ್ರ ಸೆಹ್ವಾಗ್ ಸಿ ನುವಾನ್ ಕುಲಶೇಖರ ಬಿ ಲಸಿತ್ ಮಾಲಿಂಗ  00

ಸಚಿನ್ ತೆಂಡೂಲ್ಕರ್ ಬಿ ನುವಾನ್ ಕುಲಶೇಖರ  22

ಗೌತಮ್ ಗಂಭೀರ್ ಸಿ ತಿಸಾರ ಪೆರೆರಾ ಬಿ ನುವಾನ್ ಕುಲಶೇಖರ  29

ವಿರಾಟ್ ಕೊಹ್ಲಿ ಸಿ ನುವಾನ್ ಕುಲಶೇಖರ ಬಿ ತಿಸಾರ ಪೆರೆರಾ  66

ಸುರೇಶ್ ರೈನಾ ಸಿ ಲಾಹಿರು ತಿರುಮನ್ನೆ ಬಿ ಫರ್ವೀಜ್ ಮಹಾರೂಫ್  32

ರವೀಂದ್ರ ಜಡೇಜಾ ಬಿ ನುವಾನ್ ಕುಲಶೇಖರ  17

ಇರ್ಫಾನ್ ಪಠಾಣ್ ಸಿ ಮತ್ತು ಬಿ ತಿಸಾರ ಪೆರೆರಾ  47

ಪಾರ್ಥಿವ್ ಪಟೇಲ್ ಸಿ ಲಸಿತ್ ಮಾಲಿಂಗ ಬಿ ತಿಸಾರ ಪೆರೆರಾ  04

ರವಿಚಂದ್ರನ್ ಅಶ್ವಿನ್ ಸಿ ಕುಮಾರ ಸಂಗಕ್ಕಾರ ಬಿ ಲಸಿತ್ ಮಾಲಿಂಗ  05

ಆರ್.ವಿನಯ್ ಕುಮಾರ್ ಸಿ ಸೇನನಾಯಕೆ (ಬದಲಿ ಆಟಗಾರ) ಬಿ ತಿಸಾರ ಪೆರೆರಾ 00

ಉಮೇಶ್ ಯಾದವ್ ಔಟಾಗದೆ  00

ಇತರೆ: (ಲೆಗ್‌ಬೈ-7, ವೈಡ್-9)  16

ವಿಕೆಟ್ ಪತನ: 1-0 (ವೀರೇಂದ್ರ ಸೆಹ್ವಾಗ್; 0.2), 2-38 (ಸಚಿನ್ ತೆಂಡೂಲ್ಕರ್; 7.5), 3-54 (ಗೌತಮ್ ಗಂಭೀರ್; 11.1), 4-146 (ಸುರೇಶ್ ರೈನಾ; 30.3), 5-172 (ವಿರಾಟ್ ಕೊಹ್ಲಿ; 35.3), 6-191 (ರವೀಂದ್ರ ಜಡೇಜಾ; 37.4), 7-215 (ಪಾರ್ಥಿವ್ ಪಟೇಲ್; 40.4), 8-232 (ರವಿಚಂದ್ರನ್ ಅಶ್ವಿನ್; 42.6), 9-233 (ಆರ್.ವಿನಯ್ ಕುಮಾರ್; 43.6), 10-238 (ಇರ್ಫಾನ್ ಪಠಾಣ್; 45.1).

ಲಸಿತ್ ಮಾಲಿಂಗ 8-0-55-2 (ವೈಡ್-2), ನುವಾನ್ ಕುಲಶೇಖರ 9-0-40-3 (ವೈಡ್-4), ಫರ್ವೀಜ್ ಮಹಾರೂಫ್ 10-1-52-1, ಆ್ಯಂಜೆಲೊ ಮ್ಯಾಥ್ಯೂಸ್ 4-0-12-0, ತಿಸಾರ ಪೆರೆರಾ 7.1-0-37-4 (ವೈಡ್-1), ರಂಗನ ಹೆರಾತ್ 7-0-35-0 (ವೈಡ್-1).ಫಲಿತಾಂಶ: ಶ್ರೀಲಂಕಾಕ್ಕೆ 51 ರನ್‌ಗಳ ಗೆಲುವು ಹಾಗೂ 4 ಪಾಯಿಂಟ್ಸ್.ಪಂದ್ಯ ಶ್ರೇಷ್ಠ: ನುವಾನ್ ಕುಲಶೇಖರ.ಮುಂದಿನ ಪಂದ್ಯ: ಭಾರತ-ಆಸ್ಟ್ರೇಲಿಯಾ (ಫೆಬ್ರುವರಿ 26, ಸಿಡ್ನಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry