ಭಾನುವಾರ, ಮೇ 29, 2022
21 °C

ಕ್ರಿಕೆಟ್: ವಿಂಡೀಸ್‌ಗೆ ಸರಣಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಎಎಫ್‌ಪಿ): ಲೆಂಡ್ಲ್  ಸಿಮಾನ್ಸ್ (80; 125 ಎಸೆತ, 3ಬೌಂ, 3ಸಿಕ್ಸರ್) ಹಾಗೂ ಮಾರ್ಲೊನ್ ಸ್ಯಾಮುಯೆಲ್ಸ್  (88; 74ಎಸೆತ, 12ಬೌಂ, 1ಸಿಕ್ಸರ್) ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡದವರು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಜಯ ಪಡೆದರು.ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಬಿಗುವಿನ ಬೌಲಿಂಗ್ ಮಾಡಿದ್ದು ಕೂಡ ವಿಂಡೀಸ್ ಗೆಲುವಿಗೆ ನೆರವಾಯಿತು. ಈ ಗೆಲುವಿನ ಮೂಲಕ ವಿಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು.ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 220. (ಮುಶ್ಪೀಕರ್ ರಹೀಮ್ 69, ಅಲೋಕ್ ಕಪಾಲಿ 20, ನಯೀಮ್ ಇಸ್ಲಾಂ, 30, ನಾಸೀರ್ ಹುಸೇನ್ 50, ಅಬ್ದುಲ್ ರಜಾಕ್ 25; ರವಿ ರಾಂಪಾಲ್ 27ಕ್ಕೆ2, ಕೆಮರ್ ರೋಚ್ 49ಕ್ಕೆ3, ಡರೆನ್ ಸಮಿ 42ಕ್ಕೆ2).  ವೆಸ್ಟ್ ಇಂಡೀಸ್ 42.4 ಓವರ್‌ಗಳಲ್ಲಿ 2 ವಿಕೆಟ್‌ಗೆ 221. (ಲೆಂಡ್ಲ್   ಸಿಮಾನ್ಸ್ 80, ಡಾಂಜಾ ಹ್ಯಾಟಿ 39, ಸ್ಯಾಮುಯೆಲ್ಸ್ ಔಟಾಗದೆ 88; ಶಕೀಬ್ ಅಲ್ ಹಸನ್ 30ಕ್ಕೆ2). ಫಲಿತಾಂಶ:  ವೆಸ್ಟ್ ಇಂಡೀಸ್‌ಗೆ 8 ವಿಕೆಟ್. ಪಂದ್ಯ ಶ್ರೇಷ್ಠ: ಮಾರ್ಲೊನ್ ಸ್ಯಾಮುಯೆಲ್ಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.