ಕ್ರಿಕೆಟ್: ವಿಂಡೀಸ್ ತಂಡದ ಪರದಾಟ

7

ಕ್ರಿಕೆಟ್: ವಿಂಡೀಸ್ ತಂಡದ ಪರದಾಟ

Published:
Updated:

ಲಂಡನ್: ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿರುವ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಸೋಲಿನ ಹಾದಿ ಹಿಡಿದಿದೆ.ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಚಹಾ ವಿರಾಮದ ಬಳಿಕ ಪ್ರವಾಸಿ ತಂಡ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 33 ಓವರ್‌ಗಳಲ್ಲಿ 4 ವಿಕೆಟ್‌ಗೆ 69 ರನ್ ಗಳಿಸಿತ್ತು. ವಿಂಡೀಸ್ ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 86 ರನ್ ಗಳಿಸಬೇಕಿದೆ.ಅಡ್ರಿಯಾನ್ ಭರತ್ (24) ಮತ್ತು ಕೀರನ್ ಪೊವೆಲ್ (8) ಮೊದಲ ವಿಕೆಟ್‌ಗೆ 36 ರನ್ ಸೇರಿಸಿ ಉತ್ತಮ ಆರಂಭದ ಸೂಚನೆ ನೀಡಿದ್ದರು. ಆದರೆ ಇದೇ ಮೊತ್ತಕ್ಕೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ತಂಡ ಆಘಾತ ಅನುಭವಿಸಿತು.ಇದಕ್ಕೂ ಮುನ್ನ ಮೂರು ವಿಕೆಟ್ ನಷ್ಟಕ್ಕೆ 259 ರನ್‌ಗಳಿಂದ ಶನಿವಾರ ಆಟ ಆರಂಭಿಸಿದ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 398 ರನ್‌ಗಳಿಗೆ ಆಲೌಟಾಯಿತು. ಆ್ಯಂಡ್ರ್ಯೂ ಸ್ಟ್ರಾಸ್ (122) ಕಳೆದ ದಿನದ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಔಟಾದರು.ಇಯಾನ್ ಬೆಲ್ (61) ಹಾಗೂ ಕೊನೆಯಲ್ಲಿ ಗ್ರೇಮ್ ಸ್ವಾನ್ (30) ಉತ್ತಮ ಆಟವಾಡಿದ ಕಾರಣ ತಂಡ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿತು. ಶಾನನ್ ಗ್ಯಾಬ್ರಿಯೆಲ್ (60ಕ್ಕೆ 3) ಮತ್ತು ಕೆಮರ್ ರೋಚ್ (108ಕ್ಕೆ 3) ವಿಂಡೀಸ್ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 89.5 ಓವರ್‌ಗಳಲ್ಲಿ 243 ಮತ್ತು ಎರಡನೇ ಇನಿಂಗ್ಸ್ 33 ಓವರ್‌ಗಳಲ್ಲಿ 4 ವಿಕೆಟ್‌ಗೆ 69 (ಅಡ್ರಿಯಾನ್ ಭರತ್ 24, ಡರೆನ್ ಬ್ರಾವೊ 21). ಇಂಗ್ಲೆಂಡ್: ಮೊದಲ ಇನಿಂಗ್ಸ್ 113.3 ಓವರ್‌ಗಳಲ್ಲಿ 398 (ಆ್ಯಂಡ್ರ್ಯೂ ಸ್ಟ್ರಾಸ್ 122, ಇಯಾನ್ ಬೆಲ್ 61, ಗ್ರೇಮ್ ಸ್ವಾನ್ 30, ಶಾನನ್ ಗ್ಯಾಬ್ರಿಯೆಲ್ 60ಕ್ಕೆ 3, ಕೆಮರ್ ರೋಚ್ 108ಕ್ಕೆ 3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry