ಕ್ರಿಕೆಟ್: ವಿಂಡೀಸ್ ಸಾಧಾರಣ ಮೊತ್ತ

ಮಂಗಳವಾರ, ಜೂಲೈ 16, 2019
28 °C

ಕ್ರಿಕೆಟ್: ವಿಂಡೀಸ್ ಸಾಧಾರಣ ಮೊತ್ತ

Published:
Updated:

ಪೋರ್ಟ್ ಆಫ್ ಸ್ಪೇನ್, ಟ್ರಿನಿಡ್ಯಾಡ್ (ಪಿಟಿಐ): ಭಾರತದ ಬೌಲರ್‌ಗಳ ಎದುರು ಮತ್ತೊಮ್ಮೆ ತಡಬಡಾಯಿಸಿದ ಕೆರಿಬಿಯನ್ ನಾಡಿನ ಬ್ಯಾಟ್ಸ್‌ಮನ್‌ಗಳು ತಾವಂದುಕೊಂಡಂತೆ ಬ್ಯಾಟ್ ಬೀಸಲು ಸಾಧ್ಯವೇ ಆಗಲಿಲ್ಲ. ಪರಿಣಾಮ ವೆಸ್ಟ್ ಇಂಡೀಸ್ ಕೂಡಿ ಹಾಕಿದ ಮೊತ್ತ ಅಷ್ಟೇನು ಸವಾಲಿನದ್ದಾಗಿರಲಿಲ್ಲ.ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ವಿಂಡೀಸ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿದೆ.ಈ ಗುರಿಯನ್ನು ಬೆನ್ನಟ್ಟಿರುವ ಭಾರತ ತಂಡ 22 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 100 ರನ್ ಗಳಿಸಿದ್ದ ಸಂದರ್ಭ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡ್ಡಿ ಉಂಟಾಯಿತು.  ವಿರಾಟ್ ಕೊಹ್ಲಿ (50) ಮತ್ತು ಪಾರ್ಥಿವ್ ಪಟೇಲ್ (42) ಈ ವೇಳೆ ಕ್ರೀಸ್‌ನಲ್ಲಿದ್ದರು.ವಿಂಡೀಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಕ್ರೆಡಿಟ್ ಪ್ರವಾಸಿ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಸಲ್ಲಬೇಕು. ಅವರು ತಮ್ಮ 10 ಓವರ್‌ಗಳಲ್ಲಿ ಕೇವಲ 31 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದರು.ಹಾಗಾಗಿ ಮಿಶ್ರಾ ಸ್ಪಿನ್ ದಾಳಿ ಮುಂದೆ ಅರ್ಧ ಶತಕ ಗಳಿಸಿದ ಲೆಂಡ್ಲ್ ಸಿಮನ್ಸ್ (53) ಹಾಗೂ ರಮಾನರೇಶ್ ಸರವಣ (56) ಅವರಾಟ ಮಂಕಾಯಿತು. ವೇಗಿ ಮುನಾಫ್ ಪಟೇಲ್ (35ಕ್ಕೆ3) ಕೂಡ ಮಿಂಚಿದರು.ಟಾಸ್ ಗೆದ್ದು ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ನಾಯಕ ಸುರೇಶ್ ರೈನಾ ಅವರ ಕ್ರಮವನ್ನು ಬೌಲರ್‌ಗಳು ಸಮರ್ಥಿಸಿಕೊಂಡು. ಮೊದಲ ಏಕದಿನ ಪಂದ್ಯದಲ್ಲಿ ಗುರಿ ಬೆನ್ನಟ್ಟಿ ಗೆದ್ದ್ದ್ದಿದ ಕಾರಣ ಮೊದಲು ಫೀಲ್ಡಿಂಗ್‌ಗೆ ಮುಂದಾದರು.ಆದರೆ ಲೆಂಡ್ಲೆ ಸಿಮನ್ಸ್ ಹಾಗೂ   ಕಿರ್ಕ್ ಎಡ್ವರ್ಡ್ಸ್ ಬಿರುಸಿನ ಆರಂಭ ನೀಡಿದರು. ಇವರಿಬ್ಬರು 12.1 ಓವರ್‌ಗಳಲ್ಲಿ 57 ರನ್ ಸೇರಿಸಿದರು. ಮಿಶ್ರಾ ಆರಂಭಿಕ ಜೋಡಿಯನ್ನು ಬೇರ್ಪಡಿಸಿ ಭಾರತ ಮೇಲುಗೈ ಸಾಧಿಸಲು ಕಾರಣರಾದರು. ಈ ಖುಷಿ ಹೆಚ್ಚು ಹೊತ್ತು ಬಾಳಲಿಲ್ಲ. ಏಕೆಂದರೆ ಎರಡನೇ ವಿಕೆಟ್ ಜೊತೆಯಾಟದಲ್ಲಿ ಸಿಮನ್ಸ್ ಹಾಗೂ ಸರವಣ ಎಚ್ಚರಿಕೆಯ ಇನಿಂಗ್ಸ್ ಕಟ್ಟಿದರು. ಇವರು 67 ರನ್ ಸೇರಿಸಿದರು.ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಎತ್ತಿದ ಸಿಮನ್ಸ್ ಎದುರಿಸಿದ್ದು 84 ಎಸೆತ. ಇದು ಅವರ ಏಳನೇ ಅರ್ಧ ಶತಕ. 90 ಎಸೆತಗಳನ್ನು ಆಡಿದ ಸರವಣ ಕೇವಲ ಮೂರು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಆದರೆ ಮಾರ್ಲೊನ್ ಸ್ಯಾಮುಯೆಲ್ಸ್ ಮಾತ್ರ ಕೊಂಚ ಕಾಲ ಅಬ್ಬರಿಸಿದರು. ಅವರು 32 ಎಸೆತಗಳಲ್ಲಿ 36 ರನ್ ಗಳಿಸಿದ್ದೇ ಅದಕ್ಕೆ ಸಾಕ್ಷಿ.ಆದರೆ ಸ್ಯಾಮುಯೆಲ್ಸ್ ವಿಕೆಟ್ ಪತನದ ಬಳಿಕ ವಿಂಡೀಸ್ ಪರಿಸ್ಥಿತಿ ದಾರಿ ತಪ್ಪಿದ ಹಡಗಿನಂತಾಯಿತು.ಏಕೆಂದರೆ 192ಕ್ಕೆ3 ವಿಕೆಟ್ ಕಳೆದುಕೊಂಡಿದ್ದ ಆತಿಥೇಯರು ಒಮ್ಮೆಲೆ ಕುಸಿತ ಕಂಡರು. 5 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್ ಪತನವಾದವು. ಕಿರನ್ ಪೊಲಾರ್ಡ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪಡೆದಿದ್ದು ಮಿಶ್ರಾ.ಆದರೆ ನಾಯಕ ಡೆರೆನ್ ಸಮಿ (ಔಟಾಗದೆ 22; 19 ಎಸೆತ, 1 ಬೌಂ, 2 ಸಿ.) ಹಾಗೂ ರವಿ ರಾಮ್‌ಪಾಲ್ ಕೊನೆಯಲ್ಲಿ ಗುಡುಗಿದರು. ಪರಿಣಾಮ ಎದುರಾಳಿಯ ಮೊತ್ತ ನಿರೀಕ್ಷೆಗಿಂತ ಹೆಚ್ಚಾಯಿತು.ಮುನಾಫ್ ಪಟೇಲ್ ಕೂಡ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಅವರು 35 ರನ್ ನೀಡಿ ಮೂರು ವಿಕೆಟ್ ಪಡೆದರು. ಆದರೆ ಭಾರತ ನೀಡಿದ ಇತರೆ ರನ್ 24. ಇದರಲ್ಲಿ 16 ವೈಡ್‌ಗಳಿದ್ದವು.ಸ್ಕೋರು ವಿವರ

ವೆಸ್ಟ್‌ಇಂಡೀಸ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240

ಲೆಂಡ್ಲ್ ಸಿಮನ್ಸ್ ಸ್ಟಂಪ್ಡ್ ಪಾರ್ಥಿವ್ ಬಿ ಯೂಸುಫ್ ಪಠಾಣ್  53

ಕಿರ್ಕ್ ಎಡ್ವರ್ಡ್ಸ್ ಸಿ ಪಾರ್ಥಿವ್ ಪಟೇಲ್ ಬಿ ಅಮಿತ್ ಮಿಶ್ರಾ  25

ರಮಾನರೇಶ್ ಸರವಣ ಸಿ ಯೂಸುಫ್ ಪಠಾಣ್ ಬಿ ಮುನಾಫ್ ಪಟೇಲ್ 56

ಸ್ಯಾಮುಯೆಲ್ಸ್ ಸ್ಟಂಪ್ಡ್ ಪಾರ್ಥಿವ್ ಬಿ ಯೂಸುಫ್ ಪಠಾಣ್  36

ಡ್ವೇನ್ ಬ್ರಾವೊ ಸಿ ಹರಭಜನ್ ಸಿಂಗ್ ಬಿ ಅಮಿತ್ ಮಿಶ್ರಾ  08

ಕಿರನ್ ಪೊಲಾರ್ಡ್ ಎಲ್‌ಬಿಡಬ್ಲ್ಯು ಬಿ ಅಮಿತ್ ಮಿಶ್ರಾ  00

ಕಾರ್ಲ್‌ಟನ್ ಬಾಗ್ ಬಿ ಅಮಿತ್ ಮಿಶ್ರಾ  02

ಡೆರೆನ್ ಸಮಿ ಔಟಾಗದೆ  22

ರವಿ ರಾಮ್‌ಪಾಲ್ ಸಿ ಸುರೇಶ್ ರೈನಾ ಬಿ ಮುನಾಫ್ ಪಟೇಲ್  14

ದೇವೇಂದ್ರ ಬಿಶೂ ಸಿ ಪಾರ್ಥಿವ್ ಪಟೇಲ್ ಬಿ ಮುನಾಫ್ ಟೇಲ್  00

ಆ್ಯಂಟನಿ ಮಾರ್ಟಿನ್ ಔಟಾಗದೆ  00

ಇತರೆ (ಬೈ-1, ಲೆಗ್‌ಬೈ-6, ವೈಡ್-16, ನೋಬಾಲ್-1)  24

ವಿಕೆಟ್ ಪತನ: 1-57 (ಎಡ್ವರ್ಡ್ಸ್; 12.1); 2-124 (ಸಿಮನ್ಸ್; 26.5); 3-175 (ಸ್ಯಾಮುಯೆಲ್ಸ್; 35.6); 4-192 (ಸರವಣ; 40.6); 5-192 (ಪೊಲಾರ್ಡ್; 41.3); 6-197 (ಬ್ರಾವೊ; 43.3); 7-197 (ಬಾಗ್; 43.4); 8-228 (ರಾಮ್‌ಪಾಲ್; 48.2); 9-229 (ಬಿಶೂ; 48.5).

ಬೌಲಿಂಗ್: ಪ್ರವೀಣ್ ಕುಮಾರ್ 10-0-54-0 (ವೈಡ್-1), ಮುನಾಫ್ ಪಟೇಲ್ 10-2-35-3 (ನೋಬಾಲ್-1, ವೈಡ್-1), ಅಮಿತ್ ಮಿಶ್ರಾ 10-2-31-4, ಹರಭಜನ್ ಸಿಂಗ್ 10-1-51-0 (ವೈಡ್-4), ಯೂಸುಫ್ ಪಠಾಣ್ 8-0-51-2, ಸುರೇಶ್ ರೈನಾ 2-0-11-0

(ವಿವರ ಅಪೂರ್ಣ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry