ಕ್ರಿಕೆಟ್: ವಿಶ್ವ ಟ್ವೆಂಟಿ-20 ಇಲೆವೆನ್ ತಂಡ:ಭಾರತದ ಏಕಮಾತ್ರ ಆಟಗಾರ ಕೊಹ್ಲಿ

7

ಕ್ರಿಕೆಟ್: ವಿಶ್ವ ಟ್ವೆಂಟಿ-20 ಇಲೆವೆನ್ ತಂಡ:ಭಾರತದ ಏಕಮಾತ್ರ ಆಟಗಾರ ಕೊಹ್ಲಿ

Published:
Updated:

ಕೊಲಂಬೊ (ಪಿಟಿಐ): ಅಮೋಘ ಫಾರ್ಮ್‌ನಲ್ಲಿರುವ ಭಾರತದ ವಿರಾಟ್ ಕೊಹ್ಲಿ ವಿಶ್ವ ಟ್ವೆಂಟಿ-20 ಕ್ರಿಕೆಟ್ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಆ ಆಯ್ಕೆ ನಡೆದಿದೆ.ಕೊಹ್ಲಿ 11ರ ಬಳಗದಲ್ಲಿರುವ ಭಾರತದ ಏಕಮಾತ್ರ ಆಟಗಾರ. ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಚಾಂಪಿಯನ್ ವೆಸ್ಟ್‌ಇಂಡೀಸ್, ರನ್ನರ್ ಅಪ್ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಲಂಕಾದ ಮಾಹೇಲ ಜಯವರ್ಧನೆ ಈ ತಂಡದ ನಾಯಕರಾಗಿದ್ದಾರೆ. ಐಸಿಸಿ ತಂಡವನ್ನು ಆಯ್ಕೆ ಮಾಡಿದೆ. ಮಹಿಳೆಯರ ಇಲೆವೆನ್ ತಂಡವನ್ನು ಕೂಡ ಪ್ರಕಟಿಸಲಾಗಿದ್ದು ಭಾರತದ ಪೂನಮ್ ರಾವುತ್ ಸ್ಥಾನ ಪಡೆದಿದ್ದಾರೆ. 

ಪುರುಷರ ತಂಡ: ಮಾಹೇಲ ಜಯವರ್ಧನೆ (ಶ್ರೀಲಂಕಾ; ನಾಯಕ), ಕ್ರಿಸ್ ಗೇಲ್ (ವೆಸ್ಟ್‌ಇಂಡೀಸ್), ಶೇನ್ ವಾಟ್ಸನ್ (ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ (ಭಾರತ), ಲ್ಯೂಕ್ ರೈಟ್ (ಆಸ್ಟ್ರೇಲಿಯಾ), ಬ್ರೆಂಡನ್ ಮೆಕ್ಲಮ್ (ನ್ಯೂಜಿಲೆಂಡ್-ವಿಕೆಟ್ ಕೀಪರ್), ಮಾರ್ಲೊನ್ ಸ್ಯಾಮುಯೆಲ್ಸ್ (ವೆಸ್ಟ್‌ಇಂಡೀಸ್), ಲಸಿತ್ ಮಾಲಿಂಗ (ಶ್ರೀಲಂಕಾ), ಮಿಶೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಸಯೀದ್ ಅಜ್ಮಲ್ (ಪಾಕಿಸ್ತಾನ), ಅಜಂತಾ ಮೆಂಡಿಸ್ (ಶ್ರೀಲಂಕಾ). 12ನೇ ಆಟಗಾರ: ಸುರೇಶ್ ರೈನಾ (ಭಾರತ).ಮಹಿಳಾ ತಂಡ: ಚಾರ್ಲೊಟ್ ಎಡ್ವರ್ಡ್ಸ್ (ಇಂಗ್ಲೆಂಡ್; ನಾಯಕಿ), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಪೂನಮ್ ರಾವುತ್ (ಭಾರತ), ಲಾರಾ ಮಾರ್ಷ್ (ಇಂಗ್ಲೆಂಡ್), ಸಾರಾ ಟೇಲರ್ (ಇಂಗ್ಲೆಂಡ್; ವಿಕೆಟ್ ಕೀಪರ್), ಲಿಸಾ ಸ್ಟಾಲೇಕರ್ (ಆಸ್ಟ್ರೇಲಿಯಾ), ಸ್ಟೆಫಾನಿ ಟೇಲರ್ (ವೆಸ್ಟ್‌ಇಂಡೀಸ್), ಜೂಲಿ ಹಂಟರ್. 12ನೇ ಆಟಗಾರ್ತಿ: ಜೆಸ್ ಕ್ಯಾಮರಾನ್ (ಆಸ್ಟ್ರೇಲಿಯಾ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry