ಕ್ರಿಕೆಟ್: ಶ್ರೀಲಂಕಾದ ಹೋರಾಟ

ಭಾನುವಾರ, ಜೂಲೈ 21, 2019
25 °C

ಕ್ರಿಕೆಟ್: ಶ್ರೀಲಂಕಾದ ಹೋರಾಟ

Published:
Updated:

ಸೌತ್ಯಾಂಪ್ಟನ್ (ಪಿಟಿಐ): ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಸೋಲಿನಿಂದ ಪಾರಾಗಲು ಹೋರಾಟ ನಡೆಸುತ್ತಿದ್ದಾರೆ.ದಿ ರೋಸ್ ಬೌಲ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಪ್ರವಾಸಿ ಲಂಕಾ 22 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತ್ತು. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 142 ರನ್ ಕಲೆಹಾಕಬೇಕಾಗಿದೆ.ಈ ಮೊದಲು ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಇಯಾನ್ ಬೆಲ್ (ಔಟಾಗದೆ 119) ಅವರ ಶತಕದ ನೆರವಿನಿಂದ 92.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ: ಮೊದಲ ಇನಿಂಗ್ಸ್:
64.2 ಓವರ್‌ಗಳಲ್ಲಿ 184 ಹಾಗೂ 22 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 51 (ಲಹಿರು ತಿರಿಮಾನೆ ಬ್ಯಾಟಿಂಗ್ 25; ಜೇಮ್ಸ ಆ್ಯಂಡರ್ಸನ್ 15ಕ್ಕೆ1).ಇಂಗ್ಲೆಂಡ್: ಮೊದಲ ಇನಿಂಗ್ಸ್: 92.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 377 ಡಿಕ್ಲೇರ್ಡ್ (ಅಲಿಸ್ಟರ್ ಕುಕ್ 55, ಕೇವಿನ್ ಪೀಟರ್ಸನ್ 85, ಇಯಾನ್ ಬೆಲ್ ಔಟಾಗದೆ 119, ಎಯೊನ್ ಮಾರ್ಗನ್ 71; ಸುರಂಗ ಲಕ್ಮಲ್ 99ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry