ಕ್ರಿಕೆಟ್: ಶ್ರೀಲಂಕಾ ಜತೆ ಸೆಣಸಾಟ

7

ಕ್ರಿಕೆಟ್: ಶ್ರೀಲಂಕಾ ಜತೆ ಸೆಣಸಾಟ

Published:
Updated:

ಶಿವಮೊಗ್ಗ: ಶ್ರೀಲಂಕಾದ 14 ವರ್ಷ ವಯೋಮಿತಿ ಒಳಗಿನ ತಂಡದೊಂದಿಗೆ ನಗರದ ಶಿವಮೊಗ್ಗ ಕ್ರಿಕೆಟ್ ಅಸೋಸಿಯೇಶನ್ ತಂಡ ಅಭ್ಯಾಸ ಪಂದ್ಯಗಳಲ್ಲಿ ಸೆಣಸಿತು.ನಗರದ ಜೆಎನ್‌ಎನ್‌ಸಿಇ ಕಾಲೇಜಿನ ಟರ್ಫ್ ಕ್ರೀಡಾಂಗಣದಲ್ಲಿ ಗುರುವಾರ ಶಿವಮೊಗ್ಗ ಕ್ರಿಕೆಟ್ ಅಸೋಸಿಯೇಷನ್ ಸಾಂಸ್ಕೃತಿಕ ವಿನಿಮಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿತ್ತು.ಡಿ. 13ರಿಂದ ಡಿ. 17ರವರೆಗೆ ಪಂದ್ಯಾವಳಿ ಆಯೋಜಿಸಲಾಗಿದ್ದು, 30 ಓವರ್‌ಗಳ ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಎರಡು ಪಂದ್ಯಗಳು ನಡೆಯಲಿದ್ದು, ಬೆಳಿಗ್ಗೆ 9ರಿಂದ ಮೊದಲನೇ ಪಂದ್ಯ ಮತ್ತು ಎರಡನೇ ಪಂದ್ಯ ಮಧ್ಯಾಹ್ನ 2.30ರಿಂದ ಆರಂಭವಾಗಲಿವೆ.ಇದೊಂದು ಸೌಹಾರ್ದ ಕೂಟವಾಗಿದ್ದು, ಶ್ರೀಲಂಕಾ ಮತ್ತು ಭಾರತೀಯ ತಂಡಗಳ ಆಟಗಾರರು ಪರಸ್ಪರ ತಮ್ಮ ವಿಭಿನ್ನ ಸಂಸ್ಕೃತಿಗಳನ್ನು ವಿನಿಮಯ ಮಾಡಿಕೊಳ್ಳುವರು. ಜೊತೆಗೆ  ಆಟಗಾರರಿಗೆ ಹೊಸ ಅನುಭವ ಮತ್ತು ಪ್ರೋತ್ಸಾಹ ಲಭಿಸುತ್ತಿದ್ದು, ಉಭಯ ತಂಡಗಳ ಸದಸ್ಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಶಿವಮೊಗ್ಗ  ಕ್ರಿಕೆಟ್ ಅಕಾಡೆಮಿಯ ತರಬೇತುದಾರ ವಿಶ್ವನಾಥ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry