ಬುಧವಾರ, ಅಕ್ಟೋಬರ್ 16, 2019
28 °C

ಕ್ರಿಕೆಟ್: ಸಂಭವನೀಯರ ತಂಡದಲ್ಲಿ ವೇದಾ

Published:
Updated:

ಬೆಂಗಳೂರು: ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತದ ಮಹಿಳಾ ಕ್ರಿಕೆಟ್ ತಂಡದ ಸಂಭವನೀಯರ ಪಟ್ಟಿಯಲ್ಲಿ ಕರ್ನಾಟಕದ ವೇದಾ ಕೃಷ್ಣಮೂರ್ತಿ ಸ್ಥಾನ ಪಡೆದುಕೊಂಡಿದ್ದಾರೆ.ಇಂದೋರ್‌ನಲ್ಲಿ ಸಭೆ ಸೇರಿದ್ದ ರಾಷ್ಟ್ರೀಯ ಆಯ್ಕೆ ಸಮಿತಿಯು ಇಪ್ಪತ್ತು ಆಟಗಾರ್ತಿಯರನ್ನು ಸಂಭವನೀಯರ ಶಿಬಿರಕ್ಕೆ ಆಯ್ಕೆ ಮಾಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸಂಭವನೀಯರ ತಂಡ ಇಂತಿದೆ: ಮಿಥಾಲಿ ರಾಜ್, ಅಮಿತಾ ಶರ್ಮ, ಸುಲಕ್ಷಣಾ ನಾಯಕ್, ಜೂಲನ್ ಗೋಸ್ವಾಮಿ, ಅಂಜುಮ್ ಚೋಪ್ರಾ, ವೇದಾ ಕೃಷ್ಣಮೂರ್ತಿ, ಹರ್ಮನ್‌ಪ್ರೀತ್ ಕೌರ್, ಅರ್ಚನಾ ದಾಸ್, ಡಯಾನಾ ಡೇವಿಡ್, ನೂಶೀನ್ ಅಲ್ ಖಾದೀರ್, ಸುನೀತಾ ಆನಂದ್, ಮಾಧುರಿ ಮೆಹ್ತಾ, ಮಂದಿರಾ ಮಹಾಪಾತ್ರ, ಎಸ್.ಆಶಾ, ಏಕ್ತಾ  ಬಿಸ್ತ್, ಗೌಹರ್ ಸುಲ್ತಾನಾ, ರುಮೇಲಿ ದಾರ್, ಪೂನಮ್ ರಾವತ್, ಮಮ್ತಾ ಕನೋಜಿಯಾ ಮತ್ತು ಸುಬ್ಬಲಕ್ಷ್ಮಿ ಶರ್ಮ

Post Comments (+)