ಕ್ರಿಕೆಟ್ ಸರಣಿ: ಸ್ಥಳ ಅದಲು ಬದಲು

7

ಕ್ರಿಕೆಟ್ ಸರಣಿ: ಸ್ಥಳ ಅದಲು ಬದಲು

Published:
Updated:

ನವದೆಹಲಿ (ಪಿಟಿಐ): ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಏಕದಿನ ಕ್ರಿಕೆಟ್ ಸರಣಿಯ ನಾಲ್ಕು ಹಾಗೂ ಐದನೇ ಪಂದ್ಯಗಳ ಸ್ಥಳಗಳನ್ನು ಬಿಸಿಸಿಐ ಅದಲು ಬದಲು ಮಾಡಿದೆ.ಹೊಸ ವೇಳಾಪಟ್ಟಿಯ ಪ್ರಕಾರ ನಾಲ್ಕನೇ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಜನವರಿ 23ರಂದು ಈ ಪಂದ್ಯ ಜರುಗಲಿದೆ. ಧರ್ಮಶಾಲಾದಲ್ಲಿ ಜನವರಿ 27ರಂದು ಐದನೇ ಹಾಗೂ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಧರ್ಮಶಾಲಾದಲ್ಲಿ ಆಯೋಜನೆಯಾಗಿರುವ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ.  ಮೊದಲು ನಿಗದಿಯಾಗಿದ್ದ ಪ್ರಕಾರ ನಾಲ್ಕನೇ ಪಂದ್ಯ ಧರ್ಮಶಾಲಾದಲ್ಲಿ ಹಾಗೂ ಐದನೇ ಪಂದ್ಯ ಮೊಹಾಲಿಯಲ್ಲಿ ನಡೆಯಬೇಕಿತ್ತು. ಈ ಸ್ಥಳಗಳನ್ನು ಈಗ ಅದಲು ಬದಲು ಮಾಡಲಾಗಿದೆ.ಅಕ್ಟೋಬರ್‌ನಲ್ಲಿ ಭಾರತ ಪ್ರವಾಸ ಆರಂಭಿಸಲಿರುವ ಇಂಗ್ಲೆಂಡ್ ತಂಡ 5 ಟೆಸ್ಟ್, ಎರಡು ಟ್ವೆಂಟಿ-20 ಪಂದ್ಯ ಹಾಗೂ ಏಕದಿನ ಸರಣಿ ಆಡಲಿದೆ. ಅಹಮದಾಬಾದ್‌ನಲ್ಲಿ ನ. 15ರಂದು ಮೊದಲ ಟೆಸ್ಟ್ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry