ಕ್ರಿಕೆಟ್: ಸೊಹೈಲ್ ಖಾನ್ ದಾಳಿಗೆ ಪರದಾಡಿದ ಇಂಗ್ಲೆಂಡ್

ಬರ್ಮಿಂಗ್ಹ್ಯಾಮ್ (ಎಎಫ್ಪಿ): ಬಲಗೈ ವೇಗಿ ಸೊಹೈಲ್ ಖಾನ್ (74ಕ್ಕೆ4) ಅವರ ಪರಿಣಾಮಕಾರಿ ದಾಳಿಯಿಂದಾಗಿ ಇಂಗ್ಲೆಂಡ್ ತಂಡದ ಬೃಹತ್ ಮೊತ್ತ ಸೇರಿಸುವ ಯೋಜನೆ ಕೈಗೂಡಲಿಲ್ಲ.
ಬುಧವಾರ ಇಲ್ಲಿ ಆರಂಭವಾದ ಮೂರನೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಪತ್ರಿಕೆಯು ಮುದ್ರಣಕ್ಕೆ ಹೋಗುವ ವೇಳೆಗೆ 70.4 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 233 ರನ್ ಗಳಿಸಿತ್ತು. 38 ರನ್ ಗಳಿಸಿದ್ದ ಮೋಯಿನ್ ಅಲಿ ಕ್ರೀಸ್ನಲ್ಲಿದ್ದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಾಕ್ ತಂಡಕ್ಕೆ ಬೇಗನೇ ಸಫಲತೆ ದೊರೆಯಿತು. ಇನಿಂಗ್ಸ್ನ ಹತ್ತನೇ ಓವರ್ನಲ್ಲಿ ಸೊಹೈಲ್ ಖಾನ್ ಅವರ ಗುಡ್ಲೆಂಗ್ತ್ ಎಸೆತವನ್ನು ಹೊಡೆಯುವ ಯತ್ನಸಿದ ಅಲೆಕ್ಸ್ ಹೇಲ್ಸ್ ವಿಕೆಟ್ ಕೀಪರ್ ಸರ್ಫರಾಜ್ ಅಹಮದ್ ಅವರಿಗೆ ಕ್ಯಾಚ್ ನೀಡಿದರು.
12ನೇ ಓವರ್ನಲ್ಲಿ ಜೋ ರೂಟ್ ಅವರಿಗೂ ಸೊಹೈಲ್ ಪೆವಿಲಿಯನ್ ದಾರಿ ತೋರಿಸಿದರು. ಖಾನ್ ಅವರ ಎಸೆತವನ್ನು ಬ್ಯಾಕ್ಫುಟ್ನಲ್ಲಿ ಕಟ್ ಮಾಡಿದ ರೂಟ್ ಮೊದಲ ಸ್ಲಿಪ್ನಲ್ಲಿದ್ದ ಮೊಹ್ಮದ್ ಹಫೀಜ್ಗೆ ಕ್ಯಾಚಿತ್ತರು. ನಂತರ ಬಂದ ಜೇಮ್ಸ್ ವಿನ್ಸ್ (39 ರನ್) ಅವರು ಅಲಸ್ಟರ್ ಕುಕ್ ಜೊತೆ ಗೂಡಿ ಇನಿಂಗ್ಸ್ ಬೆಳೆಸುವ ಆಟವಾಡಿ ದರು.
ಸ್ಕೋರು: ಇಂಗ್ಲೆಂಡ್ : 70.4ಓವರ್ ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 233 (ಅಲ ಸ್ಟರ್ ಕುಕ್ 45, ಅಲೆಕ್ಸ್ ಹೇಲ್ಸ್ 17, ಜೇಮ್ಸ್ ವಿನ್ಸ್ 39, ಗ್ಯಾರಿ ಬ್ಯಾಲೆನ್ಸ್ 70, ಜಾನಿ ಬೆಸ್ಟೋ 12, ಮೊಯಿನ್ ಅಲಿ ಬ್ಯಾಟಿಂಗ್ 38, ಸೊಹೈಲ್ ಖಾನ್ 74ಕ್ಕೆ4, ಯಾಸೀರ್ ಶಾ 46ಕ್ಕೆ1)
(ವಿವರ ಅಪೂರ್ಣ)
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.