ಸೋಮವಾರ, ಮೇ 23, 2022
24 °C

ಕ್ರಿಮಿನಾಶಕ ಸೋರಿಕೆ ವಾಸನೆಗೆ ಜನರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಹತ್ತಿ ಬೆಳೆಯ ಕೀಟ ನಿಯಂತ್ರಣಕ್ಕಾಗಿ ಸಿಂಪಡಿಸಲು ರೈತನೊಬ್ಬ ತೆಗೆದುಕೊಂಡು ಹೋಗುತ್ತಿದ್ದ ಕ್ರಿಮಿನಾಶಕದ ಪ್ಯಾಕೆಟ್ ರಸ್ತೆ ತುಂಬೆಲ್ಲ ಸೋರಿದ ಕಾರಣ ಉಂಟಾದ ವಾಸನೆಗೆ ಪಟ್ಟಣ ಬಸ್ತಿಬಣದ ಜನತೆ ಆತಂಕಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.ಸ್ಥಳೀಯ ಮಹಾಕವಿ ಪಂಪ ವರ್ತುಲದ ಹತ್ತಿರ ಬುಧವಾರ ರಾತ್ರಿ ಹನ್ನೊಂದರ ಸುಮಾರಿಗೆ ಕ್ರಿಮಿನಾಶಕ ಸೋರಿಕೆಯಿಂದ ಬಹಳ ಕೆಟ್ಟ ವಾಸನೆ ಬರುತ್ತಿತ್ತು. ಇದರಿಂದ ಸಂಶಯಗೊಂಡ ಜನರು ವರ್ತುಲದ ಹತ್ತಿರ ಜಮಾಯಿಸಿದ್ದರು. ಏನಿದು ವಾಸನೆ ಎಂದು ಸ್ಥಳದಲ್ಲಿ ಹುಡುಕಾಟ ನಡೆಸಿದರು.  ಆದರೆ ಅವರಿಗೆ ಯಾವುದೇ ವಸ್ತು ಕಂಡು ಬರಲಿಲ್ಲ. ವಾಸನೆ ಬಗ್ಗೆ ಜನ ಚರ್ಚೆ ನಡೆಸುತ್ತಿದ್ದರು. ವಾಸನೆಯ ತೀವ್ರತೆ ಎಷ್ಟಿತ್ತೆಂದರೆ ಒಂದೂವರೆ ಕಿ.ಮೀವರೆಗೆ ವಾಸನೆ ಬರುತ್ತಿತ್ತು.ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೆಲ ಹೊತ್ತು ಪರಿಶೀಲನೆ ನಡೆಸಿದರು. ವಾಸನೆಯನ್ನೇ ಬೆನ್ನತ್ತಿದ ಅಗ್ನಿಶಾಮಕ ಸಿಬ್ಬಂದಿ ಕೊನೆಗೆ ಕೆಎಸ್‌ಆರ್‌ಟಿಸಿ ಘಟಕದ ಹತ್ತಿರ ಇರುವ ಡಾಬಾದಿಂದ ವಾಸನೆ ಬರುತ್ತಿರುವುದನ್ನು ಗಮನಿಸಿ ಡಾಬಾ ಪ್ರವೇಶ ಮಾಡಿದರು.

ಅಲ್ಲಿ ಊಟ ಮಾಡುತ್ತಿದ್ದ ರೈತನ ಪಕ್ಕದಲ್ಲಿದ್ದ ಬ್ಯಾಗ್‌ನಿಂದ ವಾಸನೆ ಬರುತ್ತಿರುವುದನ್ನು ಸಿಬ್ಬಂದಿ ಪತ್ತೆ ಮಾಡಿದರು. ಅದು ಹತ್ತಿ ಬೆಳೆಗೆ ಸಿಂಪಡಿಸುವ ಕೀಟನಾಶಕ ಎಂದು ಪತ್ತೆಯಾದಾಗ ಆತಂಕಗೊಂಡಿದ್ದ ಜನ ನಿಟ್ಟುಸಿರು ಬಿಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.